ಸೇವೆ ವಿಸ್ತರಿಸಲು ಪ್ರಸ್ತಾವ

7
ಬೆಂಗಳೂರು–ಹುಬ್ಬಳ್ಳಿ–ಮುಂಬೈ ವಿಮಾನ ಸಂ‍ಪ‍ರ್ಕ

ಸೇವೆ ವಿಸ್ತರಿಸಲು ಪ್ರಸ್ತಾವ

Published:
Updated:
ಸೇವೆ ವಿಸ್ತರಿಸಲು ಪ್ರಸ್ತಾವ

ಮೈಸೂರು: ಬೆಂಗಳೂರು–ಹುಬ್ಬಳ್ಳಿ–ಮುಂಬೈ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿರುವ ವಿಮಾನವನ್ನು ಏಳು ದಿನಗಳಿಗೆ ವಿಸ್ತರಿಸುವಂತೆ ಕೋರಿ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

‘ಮೈಸೂರು ಹಾಗೂ ಗೋವಾಕ್ಕೆ ದೇಶ– ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಎರಡೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ವಿಮಾನ ಸೇವೆ ಒದಗಿಸುವ ಅಗತ್ಯವಿದೆ. ಹಂಪಿ ಹಾಗೂ ಗೋವಾ ನಡುವೆಯೂ ವಿಮಾನ ಸೇವೆ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬೀದರ್‌ನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಿರುದ್ಯೋಗ ಸಮಸ್ಯೆ ತಗ್ಗುತ್ತಿದೆ:  ‘ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 12.16 ಲಕ್ಷ ಉದ್ಯೋಗ ಸೃಷ್ಟಿಸಿದ್ದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿದೆ. ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮದಲ್ಲಿ 10.28 ಲಕ್ಷ ಮತ್ತು ಬೃಹತ್‌ ಕೈಗಾರಿಕೆಗಳಲ್ಲಿ 1.88 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ. ಇನ್ನೂ 6.25 ಲಕ್ಷ ಉದ್ಯೋಗಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಸೃಷ್ಟಿಸುತ್ತೇವೆ’ ಎಂದು ಹೇಳಿದರು.

‘ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ‘ಇನ್ವೆಸ್ಟ್‌ ಕರ್ನಾಟಕ ಫೋರಂ’ ಅಸ್ತಿತ್ವಕ್ಕೆ ಬಂದಿದೆ. ಇದೊಂದು ಲಾಭರಹಿತ ಕಂಪನಿಯಾಗಿದ್ದು, ಉದ್ಯಮಿಗಳಿಂದಲೇ ಬಂಡವಾಳ ಹೂಡಿಕೆದಾರರನ್ನು ಸೆಳೆಯಲಾಗುವುದು. ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry