ಟಿಸಿಎಸ್‌ ನಿವ್ವಳ ಲಾಭ ಇಳಿಕೆ

7

ಟಿಸಿಎಸ್‌ ನಿವ್ವಳ ಲಾಭ ಇಳಿಕೆ

Published:
Updated:

ಮುಂಬೈ : ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ ಸಂಸ್ಥೆ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಮೂರನೇ ತ್ರೈಮಾಸಿಕದಲ್ಲಿ ₹ 6,531 ಕೋಟಿ ನಿವ್ವಳ ಲಾಭ ಗಳಿಸಿದೆ.

2016–17ನೇ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹ 6,778 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ನಿವ್ವಳ ಲಾಭ ಶೇ 3.6 ರಷ್ಟು ಕಡಿಮೆ ಆಗಿದೆ. ಕಾರ್ಯಾಚರಣೆ ವರಮಾನ ₹ 29, 735 ಕೋಟಿಗಳಿಂದ ₹ 30,904 ಕೋಟಿಗಳಿಗೆ ಶೇ 3.9 ರಷ್ಟು ಏರಿಕೆಯಾಗಿದೆ.

ತ್ರೈಮಾಸಿಕದಲ್ಲಿ ಹೊಸದಾಗಿ 12,534 ಮಂದಿ ಸಂಸ್ಥೆ ಸೇರಿದ್ದಾರೆ. ಇದರಿಂದ ಒಟ್ಟಾರೆ ಸಿಬ್ಬಂದಿ ಸಂಖ್ಯೆ 3,90,880ಗೆ ತಲುಪಿದೆ. ಮುಂದಿನ ತ್ರೈಮಾಸಿಕಗಳಲ್ಲಿ ಉತ್ತಮ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಎಂದು ಸಿಇಒ ರಾಜೇಶ್‌ ಗೋಪಿನಾಥನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry