ವಿದ್ಯಾರ್ಥಿಗಳಿದ್ದ ದೋಣಿ ಮುಗುಚಿ ಮೂವರ ಸಾವು, 32 ಮಂದಿ ರಕ್ಷಣೆ

7

ವಿದ್ಯಾರ್ಥಿಗಳಿದ್ದ ದೋಣಿ ಮುಗುಚಿ ಮೂವರ ಸಾವು, 32 ಮಂದಿ ರಕ್ಷಣೆ

Published:
Updated:
ವಿದ್ಯಾರ್ಥಿಗಳಿದ್ದ ದೋಣಿ ಮುಗುಚಿ ಮೂವರ ಸಾವು, 32 ಮಂದಿ ರಕ್ಷಣೆ

ಮುಂಬೈ: ಇಲ್ಲಿನ ಪಾಲ್ಗಾರ್‌ ಜಿಲ್ಲೆಯ ದಹಾನು ಕರಾವಳಿಯಲ್ಲಿ 40 ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ದೋಣಿ ಮಗುಚಿ ಮೂವರು ಮಕ್ಕಳು ಸಾವನ್ನಪ್ಪಿದ್ದು, ಆರು ಮಂದಿ ಕಣ್ಮರೆಯಾಗಿದ್ದಾರೆ.

32 ಮಕ್ಕಳನ್ನು ರಕ್ಷಿಸಲಾಗಿದ್ದು, ಕಣ್ಮರೆಯಾದ ಮಕ್ಕಳಿಗಾಗಿ ಕರಾವಳಿ ರಕ್ಷಣಾ ಪಡೆ ಹಾಗೂ ಮೀನುಗಾರರ ನೆರವಿನಿಂದ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಂಡಾ ಶಾಲೆ ಹಾಗೂ ಪರ್ನಾಕಾ ಜೂನಿಯರ್‌ ಕಾಲೇಜಿನ 40 ವಿದ್ಯಾರ್ಥಿಗಳು ಬೆಳಿಗ್ಗೆ 11.30ರ ವೇಳೆಗೆ ಪಿಕ್‌ನಿಕ್‌ಗೆ ಹೊರಟ್ಟಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು  ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಮಂಜುನಾಥ್‌ ಶಿಂಘೆ ತಿಳಿಸಿದರು.

ದಹಾನು ಕಡಲತೀರದಿಂದ 20 ಮೈಲಿ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಕರಾವಳಿ ರಕ್ಷಣಾಪಡೆಯ ವಕ್ತಾರರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry