ಕಂಪನಿಗಳ ವರಮಾನ ವೃದ್ಧಿ ನಿರೀಕ್ಷೆ: ಕ್ರಿಸಿಲ್‌

7

ಕಂಪನಿಗಳ ವರಮಾನ ವೃದ್ಧಿ ನಿರೀಕ್ಷೆ: ಕ್ರಿಸಿಲ್‌

Published:
Updated:

ಮುಂಬೈ : ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಕಂಪನಿಗಳ ವರಮಾನ ಐದು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಾಣಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ವರಮಾನ ಶೇ 9 ರಷ್ಟು ವೃದ್ಧಿಯಾದರೂ, ಸರಕುಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಲಾಭದ ಪ್ರಮಾಣ ಇಳಿಕೆ ಕಾಣಲಿದೆ ಎಂದೂ ತಿಳಿಸಿದೆ.

ರಫ್ತು ಆಧಾರಿತ ವಲಯಗಳಾದ ಮಾಹಿತಿ ತಂತ್ರಜ್ಞಾನ ಮತ್ತು ಔಷಧ ವಲಯಗಳ ಪ್ರಗತಿ ನಿರಾಶಾದಾಯಕವಾಗಿರಲಿದೆ. ಉಪಭೋಗಕ್ಕೆ ಸಂಬಂಧಿಸಿದ ಕ್ಷೇತ್ರಗಳ ವರಮಾನ ಪ್ರಗತಿ ಉತ್ತಮವಾಗಿರಲಿದೆ ಎಂದೂ ಹೇಳಿದೆ.

ಜಿಎಸ್‌ಟಿಯಿಂದ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದರೂ ಮೊದಲ 2 ತ್ರೈಮಾಸಿಕಗಳಲ್ಲಿ ವರಮಾನ ವೃದ್ಧಿ ಶೇ 6 ರಷ್ಟು ಹೆಚ್ಚಾಗಿತ್ತು. ದೂರಸಂಪರ್ಕ ಕ್ಷೇತ್ರದ ಬೆಳವಣಿಗೆ ಇಳಿಕೆ ಕಾಣದೇ ಇದ್ದರೆ ಶೇ 10 ರಷ್ಟು ಪ್ರಗತಿ ಸಾಧ್ಯವಾಗುತ್ತಿತ್ತು. ಆದರೆ ರಿಲಯನ್ಸ್ ಜಿಯೊ ಪ್ರವೇಶದಿಂದ ಉಳಿದ ಕಂಪನಿಗಳೂ ಅಗ್ಗದ ದರದ ಕೊಡುಗೆ ನೀಡಬೇಕಾಯಿತು ಎಂದು ವಿಶ್ಲೇಷಣೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry