‘ಫೋನ್‌ಪೇ ಗೋಲ್ಡ್‌’ ಸೇವೆಗೆ ಚಾಲನೆ

7

‘ಫೋನ್‌ಪೇ ಗೋಲ್ಡ್‌’ ಸೇವೆಗೆ ಚಾಲನೆ

Published:
Updated:

ಬೆಂಗಳೂರು: ಡಿಜಿಟಲ್ ಹಣ ಪಾವತಿ ಸಂಸ್ಥೆ ಫೋನ್‌ಪೇ, ‘ಫೋನ್‌ಪೇ ಗೋಲ್ಡ್‌’ ಎಂಬ ಹೊಸ ಸೇವೆಯನ್ನು ಆರಂಭಿಸಿದೆ. ಗ್ರಾಹಕರು ಫೋನ್‌ಪೇ ಆ್ಯಪ್‌ ಮೂಲಕವೇ ಭೌತಿಕ ರೂಪದಲ್ಲಿ ಚಿನ್ನ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ.

‘ಆ್ಯಪ್‌ನಲ್ಲಿ ಚಿನ್ನದ ಖಾತೆ ತೆರೆಯಬಹುದು. 24 ಕ್ಯಾರೆಟ್ ಚಿನ್ನದ ಪ್ರತಿ ಕ್ಷಣದ ಬೆಲೆಯನ್ನು ಪರಿಶೀಲಿಸಿಬಹುದು. ಚಿನಿವಾರ ಪೇಟೆಯಲ್ಲಿ ಇರುವ ಬೆಲೆಯೇ ಇರುತ್ತದೆ. ಕನಿಷ್ಠ 1 ರೂಪಾಯಿಗೂ ಖರೀದಿ ಸಾಧ್ಯ’ ಎಂದು ಸಂಸ್ಥೆಯ ಬ್ಯಾಂಕ್‌ ರಿಲೇಷನ್‌ ವಿಭಾಗದ ಮುಖ್ಯಸ್ಥ ಹೇಮಂತ್‌ ಗಾಲಾ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಚಿನ್ನವನ್ನು ರೂಪಾಯಿ ಅಥವಾ ಗ್ರಾಂಗಳಲ್ಲಿ ನಮೂದಿಸಬಹುದು. ಚಿನ್ನದ ಖರೀದಿಗೆ ಯಾವುದೇ ಮರೆಮಾಚಿದ  ಶುಲ್ಕ ಇರುವುದಿಲ್ಲ. ಫೋನ್‌ಪೇ ಮೂಲಕ ಖರೀದಿಸಿದ ಚಿನ್ನವನ್ನು ಗಟ್ಟಿ ರೂಪದಲ್ಲಿ ಬ್ರಿಂಕ್ಸ್‌ ವಾಲ್ಟ್‌ನಲ್ಲಿ ಇಡಲಾಗುತ್ತದೆ. ಗ್ರಾಹಕರಿಗೆ ಭೌತಿಕ ರೂಪದಲ್ಲಿ ಚಿನ್ನ ಬೇಕಿದ್ದರೆ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಆದರೆ ಅದಕ್ಕೆ ಕನಿಷ್ಠ ಶುಲ್ಕ ತೆರಬೇಕಾಗುತ್ತದೆ’.

‘ಚಿನ್ನ ಖರೀದಿಸಿದ ಅಥವಾ ಮಾರಾಟ ಮಾಡಿದ ತಕ್ಷಣವೇ ಅದರ ಮಾಹಿತಿ ಬರುತ್ತದೆ. ಖಾತೆಯಲ್ಲಿ ಎಷ್ಟು ಚಿನ್ನ ಇದೆ ಎನ್ನುವುದನ್ನೂ ಆ್ಯಪ್‌ನಲ್ಲಿರುವ ಬ್ರಿಂಕ್ಸ್‌ ಲಾಕರ್‌ನಲ್ಲಿ ತಿಳಿದುಕೊಳ್ಳಬಹುದು. ಮಾರಾಟ ಮಾಡಿದ ಹಣವು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ.

‘ಸೇಫ್‌ಗೋಲ್ಡ್‌ ಸಹಭಾಗಿತ್ವದಲ್ಲಿ ಈ ಸೇವೆ ಆರಂಭಿಸಲಾಗಿದೆ. ಐಡಿಬಿಐ ಟ್ರಸ್ಟಿಶಿಪ್‌ ಸರ್ವೀಸಸ್‌, ಗ್ರಾಹಕರು ಖರೀದಿಸುವ ಚಿನ್ನದ ಸುರಕ್ಷತೆ ನೋಡಿಕೊಳ್ಳಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry