ಸೇನಾ ಹೆಲಿಕಾಪ್ಟರ್‌ ತಯಾರಿ ಭಾರತ–ಅಮೆರಿಕ ಒಪ್ಪಂದ

7

ಸೇನಾ ಹೆಲಿಕಾಪ್ಟರ್‌ ತಯಾರಿ ಭಾರತ–ಅಮೆರಿಕ ಒಪ್ಪಂದ

Published:
Updated:

ನವದೆಹಲಿ: ಮುಂದಿನ ತಲೆಮಾರಿನ ಸೇನಾ ಹೆಲಿಕಾಪ್ಟರ್, ಯುದ್ಧ ವಾಹನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಸಂಬಂಧ ಭಾರತ ಮತ್ತು ಅಮೆರಿಕಗಳು ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಶೀಘ್ರದಲ್ಲೇ ಮಾತುಕತೆ ನಡೆಸಲಿವೆ.

ಜತೆಗೆ ಎರಡೂ ದೇಶಗಳ ಸೇನೆಯ ಮೂರು ಪಡೆಗಳು (ಭೂಸೇನೆ, ವಾಯುಪಡೆ, ನೌಕಾಪಡೆ) ಜಂಟಿ ಸಮರಾಭ್ಯಾಸ ನಡೆಸುವ ಸಂಬಂಧವೂ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಎರಡೂ ದೇಶಗಳ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಈ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಅಮೆರಿಕದ ಮಧ್ಯೆ ಈ ರೀತಿ ಸಭೆ ನಡೆಯಲಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.

ಇದೇ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ತೆರಳಲಿದ್ದಾರೆ. ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಮತ್ತು ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry