ಭಾರತ ಸಂಜಾತ ಯುವಕನಿಗೆ ಜೈಲು

7

ಭಾರತ ಸಂಜಾತ ಯುವಕನಿಗೆ ಜೈಲು

Published:
Updated:

ಲಂಡನ್‌ : ತಂದೆಯನ್ನು ಕೊಲ್ಲಲು ಅಂತರ್ಜಾಲದಲ್ಲಿ ಸ್ಫೋಟಕಗಳ ಖರೀದಿಗೆ ಮುಂದಾಗಿದ್ದ ಆರೋಪ ಎದುರಿಸುತ್ತಿದ್ದ ಭಾರತ ಸಂಜಾತ ಯುವಕನಿಗೆ ಇಲ್ಲಿನ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಗುರುತೇಜ್ ಸಿಂಗ್‌ ರಾಂಡ್ವಾ ಶಿಕ್ಷೆಗೊಳಗಾದ ಯುವಕ. ಈತನನ್ನು ಕಳೆದ ‌ಮೇ ತಿಂಗಳಲ್ಲಿ ಬ್ರಿಟನ್‌ ರಾಷ್ಟ್ರೀಯ ಅಪರಾಧ ಏಜೆನ್ಸಿ ಬಂಧಿಸಿತ್ತು.

ಶ್ವೇತವರ್ಣದ ಯುವತಿಯನ್ನು ಮದುವೆಯಾಗಲು ರಾಂಡ್ವಾ ಮುಂದಾಗಿದ್ದಾಗ ತಂದೆ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಈತ ತಂದೆಯನ್ನೇ ಸಾಯಿಸಲು ಸಂಚು ರೂಪಿಸಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry