ಅತ್ಯಾಚಾರ: 30 ವರ್ಷ ಜೈಲು

7

ಅತ್ಯಾಚಾರ: 30 ವರ್ಷ ಜೈಲು

Published:
Updated:

ತಿರುವಣ್ಣಾಮಲೈ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ 30 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

2014ರ ಡಿಸೆಂಬರ್‌ 29ರಂದು ಟ್ಯೂಷನ್‌ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದ ಪಿ. ವಿನೋದ್‌(26) ಮತ್ತು ಅಶ್ವಿನ್‌ (20) ಎಂಬುವವರು ಬಾಲಕಿಯನ್ನು ಆಟೊದಲ್ಲಿ ಹಿಂಬಾಲಿಸಿ ಅಪಹರಿಸಿ ಅತ್ಯಾಚಾರ ಮಾಡಿದ್ದರು.

ತಿರುವಣ್ಣಾಮಲೈ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಇಬ್ಬರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಮಗಿಜೆಂಧಿ ಅವರು ಇಬ್ಬರಿಗೂ 30 ವರ್ಷ ಕಠಿಣ ಜೈಲು ಶಿಕ್ಷೆ  ಆದೇಶ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry