‘ಉದ್ಯೋಗಕ್ಕೆ ಮತ' ಅಭಿಯಾನಕ್ಕೆ ಮಹಾಮೈತ್ರಿ ಬೆಂಬಲ

7

‘ಉದ್ಯೋಗಕ್ಕೆ ಮತ' ಅಭಿಯಾನಕ್ಕೆ ಮಹಾಮೈತ್ರಿ ಬೆಂಬಲ

Published:
Updated:

ಬೆಂಗಳೂರು: ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ‘ಉದ್ಯೋಗಕ್ಕೆ ಮತ’ ಅಭಿಯಾನಕ್ಕೆ ಜನಾಂದೋಲನಗಳ ಮಹಾಮೈತ್ರಿ ಸಂಘಟನೆ ಬೆಂಬಲ ಸೂಚಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಎಸ್.ಆರ್.ಹಿರೇಮಠ್, ‌‘ನಿರುದ್ಯೋಗ ದೇಶದ ದೊಡ್ಡ ಸಮಸ್ಯೆ. ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಈ ಸಮಸ್ಯೆ ಬಗೆಹರಿಸುವ ಬದಲು ಸ್ವಾರ್ಥ ಹಾಗೂ ಧರ್ಮ ರಾಜಕಾರಣ ಮಾಡುತ್ತಿವೆ. ಹೀಗಾಗಿ, ಉದ್ಯೋಗ ಕಲ್ಪಿಸುವ ಸ್ಪಷ್ಟ ಭರವಸೆ ನೀಡುವ ಪಕ್ಷಕ್ಕೆ ಮತ ಹಾಕುವಂತೆ ಯುವಕರಲ್ಲಿ ಅರಿವು ಮೂಡಿಸುತ್ತೇವೆ’ ಎಂದು ಹೇಳಿದರು.

ಅಧಿಕಾರಕ್ಕೆ ಬಂದರೆ ಪ್ರತಿ ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ 2014ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಭರವಸೆ ನೀಡಿತ್ತು. ಅದು ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಸೃಷ್ಟಿಯಾಗಿರುವುದು ಕೇವಲ 4 ಲಕ್ಷ ಉದ್ಯೋಗ. ಮಾತಿಗೆ ತಪ್ಪಿದ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry