‘ಯುವೈಕ್ಯ’ ಬಂಟರ ಸಮಾವೇಶ

7

‘ಯುವೈಕ್ಯ’ ಬಂಟರ ಸಮಾವೇಶ

Published:
Updated:
‘ಯುವೈಕ್ಯ’ ಬಂಟರ ಸಮಾವೇಶ

ಬೆಂಗಳೂರು: ವಿಜಯನಗರದ ಬಂಟರ ಸಂಘದಲ್ಲಿ ‘ಯುವೈಕ್ಯ’ ರಾಷ್ಟ್ರೀಯ ಯುವ ಬಂಟರ ಸಮಾವೇಶವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಬಂಟರ ಸಮುದಾಯ ಚಿಕ್ಕದಾದರೂ ಪ್ರಭಾವ ಹೊಂದಿದೆ. ಮೂಲತಃ ಕೃಷಿಕರಾಗಿದ್ದ ಬಂಟರು ಭೂ ಸುಧಾರಣೆ ಕಾಯ್ದೆಯಿಂದಾಗಿ ಭೂಮಿಯನ್ನು ಕಳೆದುಕೊಂಡರು.

ಉದ್ಯೋಗ ಅರಸಿ ಬೇರೆ ನಗರಗಳಿಗೆ ವಲಸೆ ಹೋದರು. ಮುಂಬೈನಲ್ಲಿರುವ ಬಹುತೇಕ ಹೋಟೆಲ್‌ಗಳನ್ನು ಬಂಟರು ನಡೆಸುತ್ತಿದ್ದಾರೆ. ಅನೇಕ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಶ್ಲಾಘಿಸಿದರು.

ಬಂಟರ ಸಂಘದ ಅಧ್ಯಕ್ಷ ಡಿ.ಚಂದ್ರಹಾಸ ರೈ, ‘ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನಲ್ಲಿ ಬಂಟ ಸಮುದಾಯದವರು ಹೆಚ್ಚಾಗಿದ್ದಾರೆ. ಬೆಂಗಳೂರಿನಲ್ಲಿ 2 ಲಕ್ಷ ಮಂದಿ ಇದ್ದಾರೆ. ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry