ಅಜಯ್‌ ರೆಡ್ಡಿ ಶತಕ ಮಿಂಚು

7
ಅಂಧರ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಜಯ

ಅಜಯ್‌ ರೆಡ್ಡಿ ಶತಕ ಮಿಂಚು

Published:
Updated:
ಅಜಯ್‌ ರೆಡ್ಡಿ ಶತಕ ಮಿಂಚು

ದುಬೈ (ಪಿಟಿಐ): ನಾಯಕ ಅಜಯ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡ್ ಆಟದ ನೆರವಿನಿಂದ ಭಾರತ ತಂಡ ಐದನೇ ಅಂಧರ ವಿಶ್ವಕಪ್‌ ಕ್ರಿಕೆಟ್ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡದ ಎದುರು 10 ವಿಕೆಟ್‌ಗಳಿಂದ ಗೆದ್ದಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ 40 ಓವರ್‌ಗಳಲ್ಲಿ 8 ವಿಕೆಟ್‌ಗೆ 226 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 18.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು.

ಆಂಧ್ರಪ್ರದೇಶದ ಅಜಯ್  60 ಎಸೆತಗಳಲ್ಲಿ 101 ರನ್‌ ದಾಖಲಿಸಿ ಮಿಂಚಿದರು. 14 ಬೌಂಡರಿಗಳನ್ನು ಸಿಡಿಸಿದರು. ಕರ್ನಾಟಕದ ಸುನಿಲ್ ರಮೇಶ್‌ (105, 57ಎ) 17 ಬೌಂಡರಿಗಳನ್ನು ಬಾರಿಸಿದರು.

ಅಜಯ್ ರೆಡ್ಡಿ ಎದುರಾಳಿ ತಂಡದ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಯದ ರೂವಾರಿ ಎನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry