ಬಿಲಿಯರ್ಡ್ಸ್‌: ಸೆಮಿಫೈನಲ್‌ಗೆ ಪಂಕಜ್‌ ಅಡ್ವಾಣಿ

7

ಬಿಲಿಯರ್ಡ್ಸ್‌: ಸೆಮಿಫೈನಲ್‌ಗೆ ಪಂಕಜ್‌ ಅಡ್ವಾಣಿ

Published:
Updated:
ಬಿಲಿಯರ್ಡ್ಸ್‌: ಸೆಮಿಫೈನಲ್‌ಗೆ ಪಂಕಜ್‌ ಅಡ್ವಾಣಿ

ಬೆಂಗಳೂರು: ಹಾಲಿ ಚಾಂಪಿಯನ್‌ ಪಂಕಜ್‌ ಅಡ್ವಾಣಿ, ರಾಷ್ಟ್ರೀಯ ಬಿಲಿ ಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಕೆಎಸ್‌ಬಿಎ ಕೊಠಡಿಯಲ್ಲಿ ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಕರ್ನಾಟಕದ ಪಂಕಜ್‌ 150–134, 151–47, 151–110, 153–0 ಫ್ರೇಮ್‌ಗಳಿಂದ ಅಲೋಕ್‌ ಕುಮಾರ್‌ ಅವರನ್ನು ಮಣಿಸಿದರು.

ಚಾಂಪಿಯನ್‌ಷಿಪ್‌ನಲ್ಲಿ ಪಿಎಸ್‌ಪಿಬಿ ತಂಡವನ್ನು ಪ್ರತಿನಿಧಿಸಿರುವ ಪಂಕಜ್‌ 90 ನಿಮಿಷಗಳಲ್ಲಿ ಅಲೋಕ್‌ ಸವಾಲು ಮೀರಿದರು. ಭಾನುವಾರ ನಡೆಯುವ ನಾಲ್ಕರ ಘಟ್ಟದ ಹೋರಾಟದಲ್ಲಿ ಪಂಕಜ್‌, ರೂಪೇಶ್‌ ಷಾ ವಿರುದ್ಧ ಸೆಣಸಲಿದ್ದಾರೆ.

ದಿನದ ಇನ್ನೊಂದು ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ರೂಪೇಶ್‌ 4–1 ಫ್ರೇಮ್‌ಗಳಿಂದ ದೇವೇಂದ್ರ ಜೋಶಿ ವಿರುದ್ಧ ಗೆದ್ದರು. ಸೆಮಿಗೆ ಭಾಸ್ಕರ್‌: ಕರ್ನಾಟಕದ ಬಿ.ಭಾಸ್ಕರ್‌ ಕೂಡ ನಾಲ್ಕರ ಘಟ್ಟಕ್ಕೆ ಮುನ್ನಡೆದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು 9–150, 150–147, 151–114, 100–150, 150–90, 151–40 ಫ್ರೇಮ್‌ಗಳಿಂದ ಪಿಎಸ್‌ಪಿಬಿಯ ಬ್ರಿಜೇಶ್‌ ದಮಾನಿ ಅವರನ್ನು ಮಣಿಸಿದರು.

ಸೆಮಿಫೈನಲ್‌ನಲ್ಲಿ ಭಾಸ್ಕರ್‌, ಪಿಎಸ್‌ಪಿಬಿಯ ಧ್ವಜ್‌ ಹರಿಯಾ ವಿರುದ್ಧ ಸೆಣಸುವರು. ಧ್ವಜ್‌ 4–2ರಲ್ಲಿ ಸಿದ್ದಾರ್ಥ್‌ ಪಾರಿಖ್‌ ವಿರುದ್ಧ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry