ಬೌಲ್ಟ್‌ ದಾಳಿಗೆ ನಲುಗಿದ ಪಾಕ್‌

7

ಬೌಲ್ಟ್‌ ದಾಳಿಗೆ ನಲುಗಿದ ಪಾಕ್‌

Published:
Updated:
ಬೌಲ್ಟ್‌ ದಾಳಿಗೆ ನಲುಗಿದ ಪಾಕ್‌

ಡುನೆಡಿನ್ : ಟ್ರೆಂಟ್ ಬೌಲ್ಟ್‌ (17ಕ್ಕೆ5) ದಾಳಿಗೆ ನಲುಗಿದ ಪಾಕಿಸ್ತಾನ ಪಡೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 183 ರನ್‌ಗಳಿಂದ ಸೋತಿದೆ.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಐದು ಪಂದ್ಯಗಳ ಸರಣಿಯಲ್ಲಿ 3–0ರಲ್ಲಿ ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಕೇನ್ ವಿಲಿಯಮ್ಸನ್‌ ಪಡೆ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 27.2 ಓವರ್‌ಗಳಲ್ಲಿ ಕೇವಲ 74 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಪಾಕ್ ತಂಡದ ಮೊದಲ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ಗಡಿ ದಾಟದೇ ವಿಕೆಟ್ ಒಪ್ಪಿಸಿದರು. ಸರ್ಫ ರಾಜ್ ಅಹಮ್ಮದ್ (14), ರುಮ್ಮನ್ ರಾಯೀಸ್ (16) ಈ ತಂಡದ ಅಧಿಕ ಸ್ಕೋರರ್ ಎನಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 257 (ಮಾರ್ಟಿನ್ ಗಪ್ಟಿಲ್‌ 45, ಕೇನ್‌ ವಿಲಿಯಮ್ಸನ್‌ 73, ರಾಸ್‌ ಟೇಲರ್‌ 52; ರುಮ್ಮನ್ ರಾಯೀಸ್‌ 51ಕ್ಕೆ3). ಪಾಕಿಸ್ತಾನ: 27.2 ಓವರ್‌ಗಳಲ್ಲಿ 74 (ರುಮ್ಮನ್ ರಾಯೀಸ್ 16; ಟ್ರೆಂಟ್ ಬೌಲ್ಟ್‌ 17ಕ್ಕೆ5, ಕೊಲಿನ್ ಮನ್ರೊ 10ಕ್ಕೆ2, ಲಾಕಿ ಫೆರ್ಗುಸನ್ 28ಕ್ಕೆ2). ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 183 ರನ್‌ಗಳ ಜಯ. ಸರಣಿ 3–0ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಟ್ರೆಂಟ್ ಬೌಲ್ಟ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry