ಪತ್ರಕರ್ತರ ಸಂಘದ ‍ಪ್ರಶಸ್ತಿಗೆ 60 ಪತ್ರಕರ್ತರು ಭಾಜನ

7
ಜ.20ರಂದು ಶ್ರವಣಬೆಳಗೊಳದಲ್ಲಿ ಪ್ರದಾನ

ಪತ್ರಕರ್ತರ ಸಂಘದ ‍ಪ್ರಶಸ್ತಿಗೆ 60 ಪತ್ರಕರ್ತರು ಭಾಜನ

Published:
Updated:
ಪತ್ರಕರ್ತರ ಸಂಘದ ‍ಪ್ರಶಸ್ತಿಗೆ 60 ಪತ್ರಕರ್ತರು ಭಾಜನ

ಬೆಂಗಳೂರು: ‘ಪ್ರಜಾವಾಣಿ’ಯ ವಿಶೇಷ ವರದಿಗಾರ ವೈ.ಗ. ಜಗದೀಶ್, ಮುಖ್ಯ ಉಪ ಸಂಪಾದಕಿ ಎಂ.ಎಚ್. ನೀಳಾ, ಮುಖ್ಯ ವರದಿಗಾರ ಎಸ್. ರವಿಪ್ರಕಾಶ್, ಹಿರಿಯ ವರದಿಗಾರ ಬಸವರಾಜ ಹವಾಲ್ದಾರ ಮತ್ತು ಉಪ ಸಂಪಾದಕಿ ಹೇಮಾ ವೆಂಕಟ್ ಸೇರಿ 60 ಪತ್ರಕರ್ತರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2017–18ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಡಿ.ವಿ. ಗುಂಡಪ್ಪ ಪ್ರಶಸ್ತಿ: ಮಹಾದೇವ ಪ್ರಕಾಶ್, ಗರುಡನಗಿರಿ ನಾಗರಾಜ್ ಪ್ರಶಸ್ತಿ: ಗುಡಿಹಳ್ಳಿ ನಾಗರಾಜ್, ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ವೀರಭದ್ರೇಗೌಡ, ಡಾ. ಎಂ.ಎಂ. ಕಲಬುರ್ಗಿ ಪ್ರಶಸ್ತಿ: ಡಾ. ಸರಜೂ ಕಾಟ್ಕರ್, ಪಾಟೀಲ ಪುಟ್ಟಪ್ಪ ಪ್ರಶಸ್ತಿ: ಬಸವರಾಜ ಸ್ವಾಮಿ, ಎಂ. ನಾಗೇಂದ್ರರಾವ್ ಪ್ರಶಸ್ತಿ: ದೇಶಾದ್ರಿ ಹೊಸಮನಿ, ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಆರ್.ಟಿ. ವಿಠ್ಠಲ ಮೂರ್ತಿ, ಮಿಂಚು ಶ್ರೀನಿವಾಸ್ ಪ್ರಶಸ್ತಿ: ವೈ.ಗ. ಜಗದೀಶ್, ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ: ಶರಣು ಹೊನ್ನೂರು.

ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಎಂ.ಎಚ್. ನೀಳಾ, ಬದರಿನಾಥ ಹೊಂಬಾಳೆ ಪ್ರಶಸ್ತಿ: ಬಿ.ಆರ್. ಉದಯ ಕುಮಾರ್, ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಡಾ. ಕೆ. ಉಮೇಶ್ವರ್, ಡಿವಿಜಿ ಪ್ರಶಸ್ತಿ: ಜೆ.ಆರ್. ಕೆಂಚೇಗೌಡ, ಕಿಡಿ ಶೇಷಪ್ಪ ಪ್ರಶಸ್ತಿ: ಬಸವೇಗೌಡ.

ಜಿ. ನಾರಾಯಸ್ವಾಮಿ ಪ್ರಶಸ್ತಿ: ಕಾಯಪಂಡ ಶಶಿ ಸೋಮಯ್ಯ ಮತ್ತು ಸತ್ಯ ಲೋಕೇಶ್, ಪಟೇಲ್ ಬೈರಹನುಮಯ್ಯ ಪ್ರಶಸ್ತಿ: ಮಾಯಾ ಶರ್ಮ ಮತ್ತು ಗುರುಮೂರ್ತಿ, ಗಿರಿಧರ್ ಪ್ರಶಸ್ತಿ: ಗಿರೀಶ್ ಕೋಟೆ ಮತ್ತು ಕೀರ್ತಿ ನಾರಾಯಣ, ಬಿ.ಎಸ್. ವೆಂಕಟರಾಮ್‌ ಪ್ರಶಸ್ತಿ: ಧ್ಯಾನ್ ಪೂಣಚ್ಚ ಮತ್ತು ಎ.ಎಲ್. ನಾಗೇಶ್, ಖಾದ್ರಿ ಶಾಮಣ್ಣ ಪ್ರಶಸ್ತಿ: ಕೆಂಚೇಗೌಡ ಮತ್ತು ಎಸ್. ರವಿಪ್ರಕಾಶ್.

ಕೆ.ಎ. ನೆಟ್ಟಕಲ್ಲಪ್ಪ ಪ್ರಶಸ್ತಿ:  ಡಿ.ಪಿ. ರಘುನಾಥ್ ಮತ್ತು ಬಿ.ಆರ್. ವಿಶ್ವನಾಥ್, ಮಂಗಳ ಎಂ.ಸಿ. ವರ್ಗಿಸ್ ಪ್ರಶಸ್ತಿ: ಶಾಂತಲಾ ಧರ್ಮರಾಜು ಮತ್ತು ಬೆನಕನಹಳ್ಳಿ ಶೇಖರಗೌಡ, ಆರ್.ಎಲ್. ವಾಸುದೇವರಾವ್ ಪ್ರಶಸ್ತಿ: ರಶ್ಮಿ ಭಟ್ ಮತ್ತು ವಿಶ್ವ ಕುಂದಾಪುರ, ಮಂಡಿಬೆಲೆ ರಾಜಣ್ಣ ಪ್ರಶಸ್ತಿ: ಎಂ.ಎಸ್. ಬಸವಣ್ಣ ಮತ್ತು ದೀಪಕ್ ಸಾಗರ್, ಬಿ.ಜಿ. ತಿಮ್ಮಪ್ಪಯ್ಯ ಪ್ರಶಸ್ತಿ: ಹೇಮಾ ವೆಂಕಟ್ ಮತ್ತು ವಿಖಾರ್ ಅಹ್ಮದ್ ಸಯ್ಯದ್, ಆರ್.ಎಲ್. ವಾಸುದೇವ ರಾವ್ ಪ್ರಶಸ್ತಿ: ಶಿವಮೂರ್ತಿ ಜುಪ್ತಿಮಠ ಮತ್ತು ರವಿಚಂದ್ರ ಮಲ್ಲೇದ.

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ: ಬಸವರಾಜ ಹವಾಲ್ದಾರ ಮತ್ತು ಬಾಬುರಾವ್‌ ಯಡ್ರಾಮಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ: ಗಿರೀಶ್ ಗರಗ ಮತ್ತು ನಾಗರತ್ನ, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ: ಕೀರ್ತನಾ ಮತ್ತು ಕೀರ್ತಿ ಪ್ರಸಾದ್, ನಾಡಿಗೇರ ಕೃಷ್ಣರಾಯ ಸ್ಮಾರಕ ಪ್ರಶಸ್ತಿ: ನಾಮದೇವ ಕಾಗದಗಾರ ಮತ್ತು ಶಿವರಾಮ್, ವಿದ್ಯುನ್ಮಾನ ಮಾಧ್ಯಮದ ಪ್ರಶಸ್ತಿ: ಸಿ.ಎಸ್. ಬೋಪಯ್ಯ ಮತ್ತು ಎಂ.ಆರ್. ರಮೇಶ್, ಮ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ: ರಾಜು ವಿಜಾಪುರ, ಕೆ.ಎನ್. ಸುಬ್ರಹ್ಮಣ್ಯ ಪ್ರಶಸ್ತಿ: ರುದ್ರಣ್ಣ ಹರ್ತಿಕೋಟೆ, ಎಚ್‌.ಎಸ್‌. ದೊರೆಸ್ವಾಮಿ ಪ್ರಶಸ್ತಿ: ಅನಂತ ನಾಡಿಗ್.

ಡಿವಿಜಿ ಸಂಘಟನಾ ಪ್ರಶಸ್ತಿ: ರವಿ ನಾಕಲಗೂಡು, ಮಾ. ಶಿವಮೂರ್ತಿ, ಎಸ್‌.ಎನ್‌. ಅಶೋಕ್ ಕುಮಾರ್, ಅತೀಖ್‌ ಉರ್ ರೆಹಮಾನ್, ಜಯರಾಮ್, ಎಂ.ಎ. ವೆಂಕಟೇಶ್, ಸ್ವಾಮಿ, ಬಿ.ಎಂ. ರವೀಶ್, ಟಿ. ವಿಜಯ ಕುಮಾರ್, ಎಸ್‌.ಆರ್. ಪ್ರಸನ್ನ ಕುಮಾರ್ ಮತ್ತು ವೇಣುಕುಮಾರ್. ಆರ್. ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ): ಸುವರ್ಣ ಟೈಮ್ಸ್ ಆಫ್ ಕರ್ನಾಟಕ.

ಶ್ರವಣಬೆಳಗೊಳದಲ್ಲಿ ಜನವರಿ 20ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry