ನ್ಯೂಜಿಲೆಂಡ್‌ಗೆ ಜಯ

7
ಪಾಕಿಸ್ತಾನಕ್ಕೆ ಸೋಲುಣಿಸಿದ ಆಫ್ಗಾಗಿಸ್ತಾನ

ನ್ಯೂಜಿಲೆಂಡ್‌ಗೆ ಜಯ

Published:
Updated:

ಮೌಂಟ್ ಮಾಂಗನುಯ್‌, ನ್ಯೂಜಿಲೆಂಡ್‌ : ಸ್ಫೋಟಕ ಶತಕ ಸಿಡಿಸಿದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಫಿನ್ ಅಲೆನ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಜೇಕಬ್‌ ಭೂಲಾ ಅವರ ತಾಳ್ಮೆಯ ಆಟ ಆತಿಥೇಯರಿಗೆ ಸುಲಭ ಜಯ ಗಳಿಸಿಕೊಟ್ಟಿತು.

ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿನ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಎಂಟು ವಿಕೆಟ್‌ಗಳ ಜಯ ಸಾಧಿಸಿ 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಆರಂಭಿಕ ಜೋಡಿ ಕೀಗನ್ ಸಿಮನ್ಸ್ ಮತ್ತು  ಕಿಮಾನಿ ಮಿಲಿನ್ಸ್ ಅವರ ಶತಕದ ಜೊತೆಯಾಟದ ಬಲದಿಂದ 233 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 46 ರನ್‌ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡರೂ ನಂತರ ಜೇಕಬ್ ಭೂಲ ಮತ್ತು ಅಲೆನ್ ಅವರ 163 ರನ್‌ ಜೊತೆಯಾಟದ ಮೂಲಕ ನಿರಾತಂಕವಾಗಿ ದಡ ಸೇರಿತು.

ಪಾಕಿಸ್ತಾನಕ್ಕೆ ಸೋಲುಣಿಸಿದ ಆಫ್ಗಾನಿಸ್ತಾನ: ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಆಫ್ಗಾನಿಸ್ತಾನ ಐದು ವಿಕೆಟ್‌ಗಳ ಸೋಲುಣಿಸಿತು. 188 ರನ್‌ಗಳಿಗೆ ಪಾಕಿಸ್ತಾನವನ್ನು ಕಟ್ಟಿ ಹಾಕಿದ ತಂಡ 47.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ಪಪುವಾ ನ್ಯೂಜಿನಿ ವಿರುದ್ಧ ಜಿಂಬಾಬ್ವೆ 10 ವಿಕೆಟ್‌ಗಳಿಂದ ಮತ್ತು ನಮೀಬಿಯಾ ವಿರುದ್ಧ ಬಾಂಗ್ಲಾದೇಶ 87 ರನ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರ್‌:

ವೆಸ್ಟ್ ಇಂಡೀಸ್‌
: 50 ಓವರ್‌ಗಳಲ್ಲಿ 8ಕ್ಕೆ 233 (ಕೀಗನ್ ಸಿಮನ್ಸ್‌ 93, ಕಿಮಾನಿ ಮೀಲಿಯಸ್‌ 78; ಮ್ಯಾಥ್ಯೂ ಫಿಷರ್‌ 61ಕ್ಕೆ3, ರಚಿನ್ ರವೀಂದ್ರ 30ಕ್ಕೆ3);

ನ್ಯೂಜಿಲೆಂಡ್‌: 39.3 ಓವರ್‌ಗಳಲ್ಲಿ 2ಕ್ಕೆ 234 (ಜೇಕಬ್‌ ಭೂಲ 83, ಫಿನ್‌ ಅಲೆನ್‌ 115). ಫಲಿತಾಂಶ: ನ್ಯೂಜಿಲೆಂಡ್‌ಗೆ 8 ವಿಕೆಟ್‌ ಜಯ.

ಪಾಕಿಸ್ತಾನ: 47.4 ಓವರ್‌ಗಳಲ್ಲಿ 188 (ರೊಹಿಲ್ ನಜೀರ್‌ 81,; ನವೀನ್ ಉಲ್ ಹಕ್‌ 30ಕ್ಕೆ2, ಅಜ್ಮತ್ ಉಲ್ಲಾ 30ಕ್ಕೆ3, ಖ್ವಾಯಿಸ್ ಅಹಮ್ಮದ್‌ 38ಕ್ಕೆ3);

ಆಫ್ಗಾನಿಸ್ತಾನ: 47.3 ಓವರ್‌ಗಳಲ್ಲಿ 5ಕ್ಕೆ194 (ರಹಮಾನುಲ್ಲ 31, ಇಕ್ರಮ್ ಅಲಿ ಖಿಲ್‌ 46, ದಾರ್ವಿಸ್ ರಸೂಲಿ 76; ಹಸನ್ ಖಾನ್‌ 45ಕ್ಕೆ2). ಫಲಿತಾಂಶ: ಅಫ್ಗಾನಿಸ್ತಾನಕ್ಕೆ 5 ವಿಕೆಟ್ ಜಯ. ಪಪುವಾ ನ್ಯೂಜಿನಿ: 20 ಓವರ್‌ಗಳಲ್ಲಿ 95 (ವೆಸ್ಲಿ ಮದವೆರೆ 19ಕ್ಕೆ3);  ಜಿಂಬಾಬ್ವೆ: 14 ಓವರ್‌ಗಳಲ್ಲಿ 98 (ಗ್ರೆಗರಿ ಡೊಲಾರ್‌ 41, ವೆಸ್ಲಿ ಮದವೆರೆ 53). ಫಲಿತಾಂಶ: ಜಿಂಬಾಬ್ವೆಗೆ 10 ವಿಕೆಟ್ ಜಯ. (ಮಳೆಯಿಂದಾಗಿ ಪಂದ್ಯವನ್ನು 20 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು).

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 4ಕ್ಕೆ190 (ಮಹಮ್ಮದ್ ನಯೀಮ್‌ 60, ಸೈಫ್‌ ಹಸನ್‌ 84); ನಮೀಬಿಯಾ: 20 ಓವರ್‌ಗಳಲ್ಲಿ 6ಕ್ಕೆ 103 (ಎಬೆನ್‌ ವ್ಯಾನ್ ವಿಕ್‌ 55; ಖ್ವಾಜಿ ಒನಿಕ್‌ 14ಕ್ಕೆ2, ಹಸನ್‌ ಮೆಹಮೂದ್‌ 12ಕ್ಕೆ2). ಫಲಿತಾಂಶ: ಬಾಂಗ್ಲಾದೇಶಕ್ಕೆ 87 ರನ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry