ಕಲಬುರ್ಗಿ: ದುಷ್ಕರ್ಮಿಗಳಿಂದ ಬೆಳಗಿನಜಾವ ಎಂಟಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ

7

ಕಲಬುರ್ಗಿ: ದುಷ್ಕರ್ಮಿಗಳಿಂದ ಬೆಳಗಿನಜಾವ ಎಂಟಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ

Published:
Updated:
ಕಲಬುರ್ಗಿ: ದುಷ್ಕರ್ಮಿಗಳಿಂದ ಬೆಳಗಿನಜಾವ ಎಂಟಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ

ಕಲಬುರ್ಗಿ: ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಭಾನುವಾರ ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಸೇಡಂ ರಸ್ತೆಯ ಜಯನಗರದಲ್ಲಿ 2, ಬನಶಂಕರಿ ಕಾಲೊನಿ 1, ವಿಶ್ವೇಶರಯ್ಯ ಕಾಲೊನಿಯಲ್ಲಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ಒಂದೇ ಗುಂಪಿಗೆ ಸೇರಿದ ಕಿಡಿಗೇಡಿಗಳು ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿಂಗಳ ಹಿಂದೆಯಷ್ಟೇ ಇಲ್ಲಿನ ರೋಜಾ ಬಡಾವಣೆಯಲ್ಲಿ ನಾಲ್ಕು ಬೈಕ್ ಮತ್ತು ಒಂದು ಆಟೊಗೆ ಬೆಂಕಿ ಹಚ್ಚಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಕಲಬುರ್ಗಿ ಗ್ರಾಮೀಣ ಹಾಗೂ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry