ಮತದಾರ ಪಟ್ಟಿ; ಹೆಸರು ನೋಂದಣಿಗೆ ಜ.22 ಕೊನೆ ದಿನ

7

ಮತದಾರ ಪಟ್ಟಿ; ಹೆಸರು ನೋಂದಣಿಗೆ ಜ.22 ಕೊನೆ ದಿನ

Published:
Updated:

ಎಚ್.ಡಿ.ಕೋಟೆ: ಜನವರಿ 1ಕ್ಕೆ 18 ವರ್ಷ ಪೂರೈಸಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಜ.22ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಹಶೀಲ್ದಾರ್ ಕೃಷ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018ರಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವುದರಿಂದ 18 ವರ್ಷ ಮೇಲ್ಪಟ್ಟ ಎಲ್ಲರ ಹೆಸರು ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ಜ.22ರವರೆಗೆ ಚುನಾವಣಾ ಆಯೋಗ ಕಾವಾವಕಾಶ ನೀಡಿದೆ. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮತದಾರರ ಗುರುತಿನ ಚೀಟಿ ಕಳೆದು ಹೋಗಿರುವುದು, ತಿದ್ದುಪಡಿ, ವರ್ಗಾವಣೆ, ಪಟ್ಟಿಯಿಂದ ಬಿಟ್ಟುಹೋಗಿರುವುದು ಸೇರಿದಂತೆ ಇತರೆ ದೋಷ ಸರಿಪಡಿಸಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಜ.16ರಂದು ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರಿಗೆ ಕಳೆದ ನವೆಂಬರ್ 30ರಂದು ಬಿಡುಗಡೆಯಾದ ಮತದಾರ ಪಟ್ಟಿ ನೀಡಲಾಗಿದ್ದು, ಏನಾದರೂ ಲೋಪ ದೋಷ ಇದ್ದಲ್ಲಿ ತಾಲ್ಲೂಕು ಆಡಳಿತದ ಗಮನಕ್ಕೆ ತರಬಹುದು. ಪ್ರಥಮ ಪಟ್ಟಿಗೆ ನೋಂದಾಯಿಸಿಕೊಳ್ಳಲು ಜ.22ವರಗೆ ಮತ್ರ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ಗುರುತಿನ ಚೀಟಿಗೆ ಸಂಬಂಧಿಸಿದಂತಹ ದೂರು, ಸಮಸ್ಯೆಗಳು ಇದ್ದಲ್ಲಿ ಅಥವಾ ಯಾವುದೇ ಮಾಹಿತಿ ಬೇಕಿದ್ದಲ್ಲಿ ದೂ: 08228– 255325 ಸಂಪರ್ಕಿಸುವಂತೆ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry