ಒಂದು ವಾರದಲ್ಲಿ ಬಯೋಮೆಟ್ರಿಕ್ಸ್‌ ಜಾರಿ

6
ಮೈಸೂರು ವಿ.ವಿ 8 ಹಾಸ್ಟೆಲ್‌ಗಳಲ್ಲಿ ತಾಂತ್ರಿಕ ಕಾರ್ಯ ಪೂರ್ಣ

ಒಂದು ವಾರದಲ್ಲಿ ಬಯೋಮೆಟ್ರಿಕ್ಸ್‌ ಜಾರಿ

Published:
Updated:

ಮೈಸೂರು: ಮೈಸೂರು ವಿ.ವಿ ವಿದ್ಯಾರ್ಥಿ ನಿಲಯಗಳನ್ನು ಕ್ರಮಬದ್ಧ ಗೊಳಿಸುವ ಕಾರ್ಯಕ್ಕೆ ಮತ್ತೊಂದು ಗರಿ ಮೂಡಲಿದೆ. ಯುಜಿಸಿ ಮಾನದಂಡಗಳಿಗೆ ಅನುಗುಣವಾಗಿ ವಿ.ವಿ.ಯ 18 ಹಾಸ್ಟೆಲ್‌ಗಳಲ್ಲಿ 1 ವಾರದಲ್ಲಿ ಬಯೋಮೆಟ್ರಿಕ್ಸ್‌ ವ್ಯವಸ್ಥೆ ಜಾರಿಗೆ ಬರಲಿದೆ.

ಈಗಾಗಲೇ ವಿ.ವಿ. ಐದು ಹಾಸ್ಟೆಲ್‌ಗಳ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಬೆರಳಚ್ಚು ಮಾದರಿಯನ್ನು ಸಂಗ್ರಹಿಸಲಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಸೇರಿದಂತೆ ವಿ.ವಿ ವ್ಯಾಪ್ತಿಯ 18 ಹಾಸ್ಟೆಲ್‌ಗಳಲ್ಲಿ ಬಹುತೇಕ ತಾಂತ್ರಿಕ ಕಾರ್ಯವೂ ಪೂರ್ಣಗೊಂಡಿದೆ.

ಎಲ್ಲೆಲ್ಲಿ ಅಳವಡಿಕೆ?:

ಹಾಸ್ಟೆಲ್‌ನ ಎಲ್ಲ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಬಯೋಮೆಟ್ರಿಕ್ಸ್‌ ಸ್ಕ್ಯಾನಿಂಗ್ ಸಾಧನ ಅಳವಡಿಸಲಾಗುತ್ತದೆ. ಜತೆಗೆ, ಊಟದ ಮನೆ ಹಾಗೂ ಅಡುಗೆ ಮನೆಗಳಿಗೂ ಇದೇ ಸಾಧನವನ್ನು ಅಳವಡಿಸಲಾಗಿರುತ್ತದೆ. ಅತಿ ಸಣ್ಣ ಹಾಸ್ಟೆಲ್‌ಗಳಲ್ಲಿ ಮಾತ್ರ ಕೇವಲ ಪ್ರವೇಶ ದ್ವಾರದಲ್ಲಿ ಈ ಸಾಧನ ಅಳವಡಿಸಲಾಗುತ್ತದೆ ಎಂದು ವಿ.ವಿ.ಯ ಕಂಪ್ಯೂಟರ್‌ ವಿಜ್ಞಾನ ವಿಭಾಗದ ಸಂಯೋಜಕ ಪ್ರೊ.ಜಿ.ಹೇಮಂತಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಸಿಟಿವಿ ಕಣ್ಗಾವಲು: ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಸುವುದು ಮಹತ್ವದ ಹೆಜ್ಜೆಯಾಗಿದೆ. ಅಡುಗೆ ಮನೆಗಳಲ್ಲಿ ಸಿಸಿಟಿವಿ ಇರುವ ಕಾರಣ, ಅಡುಗೆ ತಯಾರಿಯ ಮೇಲೆ ಕಣ್ಣಿಡಬಹುದು. ಅಲ್ಲದೇ, ಆಹಾರ ಸೇವಿಸುವ ವಿದ್ಯಾರ್ಥಿಗಳ ಮೇಲೂ ನಿಗಾ ಇಡಬಹುದು. ಅಡುಗೆಮನೆಯಲ್ಲೂ ಬಯೋಮೆಟ್ರಿಕ್‌ ಸಾಧನ ಅಳವಡಿಸಿದರೆ ಎಷ್ಟು ವಿದ್ಯಾರ್ಥಿಗಳು ಆಹಾರ ಸೇವಿಸುತ್ತಿದ್ದಾರೆ ಎಂಬ ಲೆಕ್ಕವೂ ಸಿಕ್ಕಂತಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹಾಸ್ಟೆಲ್‌ಗಳಲ್ಲಿ ಪಾರದರ್ಶಕತೆ ಮೂಡಿಸುವುದು, ಯಾವುದೇ ಅಕ್ರಮವಾಗದಂತೆ ತಡೆಗಟ್ಟುವುದು ಇದರಿಂದ ಸಾಧ್ಯವಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ಈ ಮೂಲಕ ಶಿಸ್ತನ್ನೂ ಮೂಡಿಸಬಹುದು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry