ಒಡೆದ ನೀರಿನ ಕೊಳವೆ: ಹೆದ್ದಾರಿಯಲ್ಲಿ ಗುಂಡಿ

7

ಒಡೆದ ನೀರಿನ ಕೊಳವೆ: ಹೆದ್ದಾರಿಯಲ್ಲಿ ಗುಂಡಿ

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ ನೀರಿನ ಕೊಳವೆ ಒಡೆದು ಹಲವು ದಿನಗಳಿಂದ ಹೆದ್ದಾರಿಯಲ್ಲಿ ನೀರು ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಗುಂಡಿಯುಂಟಾಗಿದೆ. ಗ್ರಾಮ ಪಂಚಾಯಿತಿ ಎದುರೇ ಈ ಅವ್ಯವಸ್ಥೆ ಉಂಟಾಗಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ನೀರು ಹರಿಯುತ್ತಿದೆ. ಮಂಡಿಯುದ್ದ ಗುಂಡಿ ನಿರ್ಮಾಣವಾಗಿದ್ದು ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.

ನೀರಿನ ಕೊಳವೆ ಒಡೆದು ತಿಂಗಳು ಕಳೆದರೂ ಗ್ರಾಮ ಪಂಚಾಯಿತಿ ಅಥವಾ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಇತ್ತ ಗಮನ ಹರಿಸುತ್ತಿಲ್ಲ ಎಂದು ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂದೀಶ್‌ ಕುಮಾರ್‌ ದೂರಿದ್ದಾರೆ.

‘ಇದನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ. ಅವರು ಕಚೇರಿಗೂ ಬರುತ್ತಿಲ್ಲ; ಜನರಿಗೆ ಸಿಗುತ್ತಿಲ್ಲ. ಸಣ್ಣ ಪ್ರಮಾಣದ ಗುಂಡಿ ದಿನದಿಂದ ದೊಡ್ಡದಾಗುತ್ತಿದೆ. ಡಾಂಬರು ರಸ್ತೆಯ ಮಧ್ಯೆ ಕೆಸರು ತುಂಬಿಕೊಂಡಿದೆ. ನೀರಿನ ಕೊಳವೆ ರಿಪೇರಿ ಮಾಡದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ದಸಂಸ ಮುಖಂಡ ಕುಬೇರಪ್ಪ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry