ದಲಿತರ ಮನೆಯಲ್ಲಿ ನಿಜಗುಣಾನಂದ ಸ್ವಾಮೀಜಿ ಭೋಜನ

7
ಲಿಂಗಾಯತ ಧರ್ಮದ ಉತ್ಥಾನಕ್ಕೆ ಹರಿಜನಕೇರಿಗೆ ಭೇಟಿ

ದಲಿತರ ಮನೆಯಲ್ಲಿ ನಿಜಗುಣಾನಂದ ಸ್ವಾಮೀಜಿ ಭೋಜನ

Published:
Updated:
ದಲಿತರ ಮನೆಯಲ್ಲಿ ನಿಜಗುಣಾನಂದ ಸ್ವಾಮೀಜಿ ಭೋಜನ

ಧಾರವಾಡ: ‘ವೈದಿಕ ಪರಂಪರೆ ಉಳಿವಿಗಾಗಿ ಉಡುಪಿ ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ನೀಡಿದರೆ, ಲಿಂಗಾಯತ ಧರ್ಮದ ಉತ್ಥಾನಕ್ಕಾಗಿಕ್ಕೆ ದಲಿತರ ಮನೆಗೆ ನಾನು ಭೇಟಿ ನೀಡಿದ್ದೇನೆ’ ಎಂದು ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಮಾಳಾಪೂರದ ಹರಿಜನಕೇರಿಗೆ ಶನಿವಾರ ಭೇಟಿ ನೀಡಿ, ದಲಿತರ ಮನೆಯಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಲಿಂಗಾಯತ ಸ್ವಾಮೀಜಿಗಳು ದಲಿತರ ಮನೆಯಲ್ಲಿ ಪ್ರಸಾದ ಸೇವನೆ ಮಾಡುವ ಪರಂಪರೆ ಮೊದಲಿನಿಂದಲೂ ಇದೆ. ದಲಿತರ ಉದ್ದಾರಕ್ಕಾಗಿಯೇ ಲಿಂಗಾಯತ ಧರ್ಮ ಸ್ಥಾಪನೆಯಾಗಿದೆ. ಬಸವಣ್ಣನವರೇ ‘ಮಾದಿಗ ಚನ್ನಯ್ಯರ ಮಗ ನಾನು’ ಎಂಬುದಾಗಿ ಹೇಳಿದ್ದಾರೆ. ಪ್ರೀತಿಯನ್ನು ಕೊಟ್ಟ, ಧರ್ಮ ಸ್ವೀಕರಿಸಿದ ಅವರಿಗೂ ಲಿಂಗದೀಕ್ಷೆ ನೀಡುತ್ತೇವೆ. ಧರ್ಮ ಎಂಬುದು ಹೃದಯ ಪರಿವರ್ತನೆಯ ಕಾರ್ಯವಾಗಿದ್ದು, ಯಾವುದೇ ಒತ್ತಾಯ ಇಲ್ಲ’ ಎಂದರು.

‘ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಬಸವರಾಜ ಹೊರಟ್ಟಿ ನಡುವಿನ ವಾದ-ವಿವಾದ ಮುಗಿದ ಅಧ್ಯಾಯ. ಲಿಂಗಾಯತದ ಒಳ ಪಂಗಡದಲ್ಲಿ ವೀರಶೈವವೂ ಒಂದಾಗಿದೆ. ಅದೊಂದು ಪಂಥ ಅಷ್ಟೇ. ಈ ಸತ್ಯ ಅರಿತು ಬಂದರೆ ಎಲ್ಲರಿಗೂ ಒಳ್ಳೆಯದು’ ಎಂದು ತಿಳಿಸಿದರು.

ರಾಜಣ್ಣ ಮಟ್ಟಿ, ಮುಕ್ತಿಯಾರ ಪಠಾಣ, ಕರೆಪ್ಪ ಮಾಳಗಿಮನಿ, ಶಿಡ್ಲಪ್ಪ ಹೆಗಡೆ, ಪರಶುರಾಮ ದೊಡ್ಡಮನಿ, ರಾಕೇಶ ದೊಡ್ಡಮನಿ, ಗಂಗಪ್ಪ ಹೆಗಡೆ, ಸುಧೀರ ಮುಧೋಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry