ಮಕರ ಸಂಕ್ರಾಂತಿ ಪವಿತ್ರ ಸ್ನಾನ, ಪೊಂಗಲ್ ಸಂಭ್ರಮ

7

ಮಕರ ಸಂಕ್ರಾಂತಿ ಪವಿತ್ರ ಸ್ನಾನ, ಪೊಂಗಲ್ ಸಂಭ್ರಮ

Published:
Updated:
ಮಕರ ಸಂಕ್ರಾಂತಿ ಪವಿತ್ರ ಸ್ನಾನ, ಪೊಂಗಲ್ ಸಂಭ್ರಮ

ಮುಂಬೈ, ಕೊಯಮತ್ತೂರು, ಪಶ್ಚಿಮ ಬಂಗಾಳ: ಮಕರ ಸಂಕ್ರಾಂತಿ ನಿಮಿತ್ತ ದೇಶದ ವಿವಿಧೆಡೆ ಸಂಭ್ರಮದ ವಾತಾವರಣ ಕಳೆಗಟ್ಟುತ್ತಿದ್ದು, ಭಾನುವಾರ ಜನರು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಪೂಜೆ ಹಾಗೂ ಪೊಂಗಲ್‌ ತಯಾರಿಸಿ ನೈವೇದ್ಯ ಸಲ್ಲಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಗಂಗಾ ಸಾಗರದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ನಮನ ಸಲ್ಲಿಸುತ್ತಿದ್ದಾರೆ.

ಮುಂಬೈ ಸಮೀಪದ ಕೋಲಿವಾಡದಲ್ಲಿ ಮಹಿಳೆಯರು ಸಾಲಾಗಿ ಕಬ್ಬಿನ ತೋರಣ ಇರಿಸಿ ಸಿಂಗರಿಸಿ, ಪಾತ್ರೆಗಳಲ್ಲಿ ಪೊಂಗಲ್‌ ತಯಾರಿಸುವಲ್ಲಿ ತೊಡಗಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೊಂಗಲ್‌ ಆಚರಣೆಗಾಗಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ ಪೊಂಗಲ್‌ ಹಬ್ಬದ ಮೊದಲನೇ ದಿನದ ಭೌಗಿ ಆಚರಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry