ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ಸಾಧನೆಯೇ ಕಾಂಗ್ರೆಸ್ಸಿಗೆ ಶ್ರೀ ರಕ್ಷೆ’

Last Updated 14 ಜನವರಿ 2018, 7:37 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ರಾಜ್ಯದ ಆರು ಕೋಟಿ ಜನತೆಯಲ್ಲಿ ಐದು ಕೋಟಿಯಷ್ಟು ಜನ ನಮ್ಮ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಎಲ್ಲ ಯೋಜನೆಗಳ ಸಾಧನೆಯೇ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಲು ಕಾರಣವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಹುಂಡೇಕಾರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಬೂತ್ ಮಟ್ಟದ ಅಧ್ಯಕ್ಷ ಹಾಗೂ ಬಿಎಲ್ಎಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ ಚುನಾವಣೆ ಸಮಯದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರಕಾರ ಸಫಲವಾಗಿದೆ. ಅಲ್ಲದೇ ರಾಜ್ಯದ ಸುಮಾರು 20 ಲಕ್ಷಕ್ಕೂ ಅಧಿಕ ರೈತರ ಸಾಲ ಮನ್ನಾ ಮಾಡಿ. ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯಂ ಠಾಕೂರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಜಲಜಾ ನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷವು ಗೆಲ್ಲುವ ಕುದುರೆಗಳನ್ನು ಹುಡುಕುತ್ತಿದೆ. ಸಮರ್ಥರನ್ನು ಸಮೀಕ್ಷೆಗಳ ಮೂಲಕ ಗುರುತಿಸಿ ಹೈಕಮಾಂಡ್ ಟಿಕೆಟ್ ನೀಡಲಿದೆ. ಈ ಮತಕ್ಷೇತ್ರದಲ್ಲಿ ಸುಮಾರು 30 ಸಾವಿರ ಯುವ ಮತದಾದರು ಸೇರ್ಪಡೆಯಾಗಿದ್ದು. ಅವರಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಿ ಪಕ್ಷದ ಪರವಾಗಿರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಪದಾಧಿಕಾರಿ, ಕಾರ್ಯಕರ್ತ ಮನೆ ಮನೆಗೆ ತೆರಳಿ ಮತ ಪಡೆಯುವ ಕಾರ್ಯ ಮಾಡಿ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಂತೆ ಕರೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ರಾಮಲಿಂಗಯ್ಯ, ರಾಜಶೇಖರ ಮೆಣಸಿನಕಾಯಿ, ದಯಾನಂದ ಪಾಟೀಲ ಬೂತ್ ಮಟ್ಟದ ಅಧ್ಯಕ್ಷರಿಗೆ ತರಬೇತಿ ನೀಡಿದರು.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ವೀರಕುಮಾರ ಪಾಟೀಲ, ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ನಿಂಗನಗೌಡ ಪಾಟೀಲ, ಬಿ.ಎಸ್. ಪಾಟೀಲ ಯಾಳಗಿ, ಆನಂದಗೌಡ ದೊಡ್ಡಮನಿ, ಸುಭಾಷ ಛಾಯಾಗೋಳ, ಶರಣಪ್ಪ ಸುಣಗಾರ, ವಕೀಲ ಬಸನಗೌಡ ಬಿರಾದಾರ, ಸಿದ್ಧನಗೌಡ ಪಾಟೀಲ ಅಸ್ಕಿ, ಮುಸ್ತಾಕ ಮುಲ್ಲಾ,ಚಾಂದಸಾಬ ಗಡಲಗಾಂವ,ಬಾಪುಗೌಡ ಪಾಟೀಲ, ಮಹಾದೇವಿ ಗೋಕಾಕ,ಕೆಂಪೇಗೌಡ ಕೇಶಪ್ಪಗೋಳ,ಬಶೀರ ಬೇಪಾರಿ, ಕಾಂತಪ್ಪ ಕೋರಿ, ಮುರ್ತುಜಾ ತಾಂಬೋಳಿ, ಗುರುರಾಜ ಆಕಳವಾಡಿ, ಮಲ್ಲನಗೌಡ ಬಿರಾದಾರ ಪಾಲ್ಗೊಂಡಿದ್ದರು.

ಸಾಹೇಬಗೌಡ ಬಿರಾದಾರ ನಿರೂಪಿಸಿದರು. ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗನಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು.ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯಂ ಠಾಕೂರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಜಲಜಾ ನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷವು ಗೆಲ್ಲುವ ಕುದುರೆಗಳನ್ನು ಹುಡುಕುತ್ತಿದೆ. ಸಮರ್ಥರನ್ನು ಸಮೀಕ್ಷೆಗಳ ಮೂಲಕ ಗುರುತಿಸಿ ಹೈಕಮಾಂಡ್ ಟಿಕೆಟ್ ನೀಡಲಿದೆ. ಈ ಮತಕ್ಷೇತ್ರದಲ್ಲಿ ಸುಮಾರು 30 ಸಾವಿರ ಯುವ ಮತದಾದರು ಸೇರ್ಪಡೆಯಾಗಿದ್ದು. ಅವರಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಿ ಪಕ್ಷದ ಪರವಾಗಿರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಪದಾಧಿಕಾರಿ, ಕಾರ್ಯಕರ್ತ ಮನೆ ಮನೆಗೆ ತೆರಳಿ ಮತ ಪಡೆಯುವ ಕಾರ್ಯ ಮಾಡಿ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಂತೆ ಕರೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ರಾಮಲಿಂಗಯ್ಯ, ರಾಜಶೇಖರ ಮೆಣಸಿನಕಾಯಿ, ದಯಾನಂದ ಪಾಟೀಲ ಬೂತ್ ಮಟ್ಟದ ಅಧ್ಯಕ್ಷರಿಗೆ ತರಬೇತಿ ನೀಡಿದರು. ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ವೀರಕುಮಾರ ಪಾಟೀಲ, ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ, ನಿಂಗನಗೌಡ ಪಾಟೀಲ, ಬಿ.ಎಸ್. ಪಾಟೀಲ ಯಾಳಗಿ, ಆನಂದಗೌಡ ದೊಡ್ಡಮನಿ, ಸುಭಾಷ ಛಾಯಾಗೋಳ, ಶರಣಪ್ಪ ಸುಣಗಾರ, ವಕೀಲ ಬಸನಗೌಡ ಬಿರಾದಾರ, ಸಿದ್ಧನಗೌಡ ಪಾಟೀಲ ಅಸ್ಕಿ, ಮುಸ್ತಾಕ ಮುಲ್ಲಾ,ಚಾಂದಸಾಬ ಗಡಲಗಾಂವ,ಬಾಪುಗೌಡ ಪಾಟೀಲ, ಮಹಾದೇವಿ ಗೋಕಾಕ,ಕೆಂಪೇಗೌಡ ಕೇಶಪ್ಪಗೋಳ,ಬಶೀರ ಬೇಪಾರಿ, ಕಾಂತಪ್ಪ ಕೋರಿ, ಮುರ್ತುಜಾ ತಾಂಬೋಳಿ, ಗುರುರಾಜ ಆಕಳವಾಡಿ, ಮಲ್ಲನಗೌಡ ಬಿರಾದಾರ ಪಾಲ್ಗೊಂಡಿದ್ದರು. ಸಾಹೇಬಗೌಡ ಬಿರಾದಾರ ನಿರೂಪಿಸಿದರು. ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗನಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT