‘ಇಲ್ಯಾಸ್‌ ಪಕ್ಷದಲ್ಲಿ ಸಕ್ರಿಯನಾಗಿರಲಿಲ್ಲ’

7
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಹರೀಶ್‌ಕುಮಾರ್‌

‘ಇಲ್ಯಾಸ್‌ ಪಕ್ಷದಲ್ಲಿ ಸಕ್ರಿಯನಾಗಿರಲಿಲ್ಲ’

Published:
Updated:

ಮಂಗಳೂರು: ‘ಶನಿವಾರ ಕೊಲೆಯಾಗಿರುವ ಟಾರ್ಗೆಟ್ ಇಲ್ಯಾಸ್‌ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯನಾಗಿರಲಿಲ್ಲ. ಸಚಿವರು ಸೇರಿದಂತೆ ಎಲ್ಲರೂ ಅವನನ್ನು ದೂರ ಇರಿಸಿದ್ದರು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌ ತಿಳಿಸಿದರು.

ಮೃತ ಯುವಕ ಉಳ್ಳಾಲ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷನಾಗಿದ್ದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಆತ ಪಕ್ಷದವರ ಗಮನಕ್ಕೆ ಬಾರದಂತೆ ಯುವ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿದ್ದ. ಉಳ್ಳಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷನಾಗಿ ಆಯ್ಕೆಯಾದರೂ ಆತ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದ’ ಎಂದರು.

‘ನಾನು ಯಾವತ್ತೂ ಆತನನ್ನು ನೋಡಿಲ್ಲ. ನಮ್ಮ ಪಕ್ಷದ ಸಚಿವರು, ಶಾಸಕರು ಕೂಡ ಆತನನ್ನು ದೂರ ಇಟ್ಟಿದ್ದರು. ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳು ಪಕ್ಷದ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಚ್ಚರ ವಹಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry