ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪರಾವಲಂಬಿ ಧರ್ಮವಲ್ಲ: ಮಹಾದೇವಿ

Last Updated 14 ಜನವರಿ 2018, 8:38 IST
ಅಕ್ಷರ ಗಾತ್ರ

ಕೂಡಲಸಂಗಮ: ‘ಲಿಂಗಾಯತ ಪರಾವಲಂಬಿ ಧರ್ಮವಲ್ಲ, ಸ್ವಾವಲಂಬಿ ಧರ್ಮ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಮಹಾದೇವಿ ಹೇಳಿದರು.
31ನೇ ಶರಣಮೇಳದಲ್ಲಿ ನಡೆದ ಲಿಂಗಾಯತ ಧರ್ಮ ಹೋರಾಟ ಹಾಗೂ ಸಾಮಾಜಿಕ ಸಮಾನತೆಯಲ್ಲಿಯುವಕರ ಪಾತ್ರ ವಿಷಯದ ಯುವಜನ ಗೋಷ್ಠಿ ಸಮಾರಂಭದಲ್ಲಿ ಮಾತನಾಡಿ ‘ಬಸವಣ್ಣ ನಾಲ್ಕು ಕಾಲಿನ ಎತ್ತಲ್ಲ, ಮಾನವಕುಲವನ್ನು ಸಮಾನತೆಯಿಂದ ಎತ್ತಿ ಹಿಡಿದ ಮಹಾ ಮಾನವತಾವಾದಿ ಎಂದು ಪಂಚಾಚಾರ್ಯರು ಅರಿಯಬೇಕು. ಬಸವಣ್ಣ ಬರುವುದಕ್ಕಿಂತ ಪೂರ್ವದಲ್ಲಿ ಎಲ್ಲಿಯೂ ಬಸವಣ್ಣನ ದೇಗುಲಗಳಿಲ್ಲ. ಬಸವೇಶ್ವರ ನಂತರ ಬಸವಣ್ಣನ ದೇಗುಲಗಳು ನಿರ್ಮಾಣವಾದವು’ ಎಂದು ಹೇಳಿದರು.

ಸಂಪ್ರದಾಯವಾದಿಗಳು ಇಲ್ಲಿ ನಂದಿ ರೂಪದ ಬಸವಣ್ಣನನ್ನು ಕೂಡಿಸಿದರು. ಆದ್ದರಿಂದ ಬಸವ ಭಕ್ತರು ನಂದಿ ರೂಪದ ಬಸವಣ್ಣನನ್ನು ತೆಗೆದು ಗುರು ಬಸವಣ್ಣನ ಮೂರ್ತಿ ಇಡುವ ಕಾರ್ಯವನ್ನು ಎಲ್ಲ ಬಸವ ಭಕ್ತರು ಮಾಡಬೇಕು. ಲಿಂಗಾಯತರು ರುದ್ರಪೂಜೆ ಮಾಡಬಾರದು. ರುದ್ರಪೂಜೆ ಮಾಡಿದರೆ ಲಿಂಗಾಯತ ಧರ್ಮಕ್ಕೆ ಅಪಚಾರ ಮಾಡಿದಂತೆ’ ಎಂದರು.

ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ‘ಶರಣರ ಜೀವನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಜಂಗಮವೆಂಬ ಜಾತಿ ಅಳಿಯಬೇಕು. ಜಂಗಮ ಎಂದರೆ ಧರ್ಮ ಪ್ರಚಾರಕ ಎಂಬುದನ್ನು ಎಲ್ಲಿತನಕ ಲಿಂಗಾಯತರು ಅರಿಯುವುದಿಲ್ಲವೋ ಅಲ್ಲಿತನಕ ಪಂಚಾಚಾರ್ಯರು ಆಳುತ್ತಾರೆ, ವ್ಯವಸ್ಥಿತವಾಗಿ ಸುಲಿಯುತ್ತಾರೆ’ ಎಂದರು.

ಬೆಳಗಾವಿ ಪ್ರಾಂತೀಯ ಕಚೇರಿ ಹೆಚ್ಚುವರಿ ನಿರ್ದೇಶಕ ಎಸ್.ದಿವಾಕರ ಮಾತನಾಡಿ ‘ವೀರಶೈವವು ಧರ್ಮವೂ ಅಲ್ಲ, ಪಂಥವೂ ಅಲ್ಲ ಅದು ಕೇವಲ ಒಂದು ವೃತ ಅಷ್ಟೆ. ಸರ್ವ ಜಾತಿಗಳ ಒಕ್ಕೂಟ ಲಿಂಗಾಯತ ಧರ್ಮ’ ಎಂದರು. ಮಹಾರಾಷ್ಟ್ರದ ಅವಿನಾಶ ಬೋಶಿಕರ್ ಮಾತನಾಡಿ, ‘ಮಠದಲ್ಲಿ ಬಸವೇಶ್ವರರ ಭಾವಚಿತ್ರ, ವಚನ ಸಾಹಿತ್ಯ ಇರದಿದ್ದರೆ ಇಡಲು ತಿಳಿಸಬೇಕು. ಅದಾಗದಿದ್ದರೆ ಅಂಥ ಸ್ವಾಮೀಜಿ ಅನ್ನು ಮಠದಿಂದ ಹೊರಹಾಕಬೇಕು’ ಎಂದರು.

ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ ಮಾತನಾಡಿ, ನಮ್ಮ ಸಾಂವಿಧಾನಿಕ ಹಕ್ಕನ್ನು ಕೇಳುತ್ತಿದ್ದೇವೆ. ಹೋರಾಟ ಪಕ್ಷಾತೀತವಾಗಿದೆ. ವೈದಿಕರು, ವೀರಶೈವರು ಹೋರಾಟಕ್ಕೆ ತಡೆಯೊಡ್ಡಲು ಕುತಂತ್ರ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಬಸವ ಧ್ವಜಾರೋಹಣವನ್ನು ಚನ್ನಬಸವಾನಂದ ಸ್ವಾಮೀಜಿ ಮಾಡಿದರು. ಹೈದರಾಬಾದದ ಧನರಾಜ ಜೀರಗಿ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ಮಾತೆ ಜ್ಞಾನೇಶ್ವರಿ, ಮಾತೆ ಸತ್ಯಾದೇವಿ, ಚನ್ನಬಸವರಾಜ ಸ್ವಾಮೀಜಿ, ಆರ್.ಜಿ.ಶೆಟ್ಟಗಾರ, ದಿಲೀಪ್ ಭತಮುಗರ್ೆ, ಕ್ಯಾಪ್ಟನ್ ವಿಶ್ವನಾಥ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT