‘ಜನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ’

7

‘ಜನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ’

Published:
Updated:

ಚಿಟಗುಪ್ಪ: ‘ಜನಪದ ಕಲೆ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮರೆಯಾಗುತ್ತಿದ್ದು, ಜನಪದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಹುಮನಾಬಾದ್ ತಾಲ್ಲೂಕಿನ ಕಂದಗುಳ ಗ್ರಾಮದಲ್ಲಿ ಈಚೆಗೆ ನಡೆದ ಕರ್ನಾಟಕ ಜಾನಪದ ಪರಿಷತ್ ಮಹಿಳಾ ಘಟಕದ ಉದ್ಘಾಟನೆ ಹಾಗೂ ಜೋಗತಿಯರು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿತಾ ಕೋಡ್ಲಿಕರ್ , ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್ ಡಾಕುಳಗಿ ಮಾತನಾಡಿ,‘ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆ ಕಲಾವಿದರನ್ನು ಗುರುತಿಸಿ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು. ಅಲ್ಲದೆ, ಅಗತ್ಯ ಪ್ರೋತ್ಸಾಹಧನ ನೀಡಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಬಸಪ್ಪ ಎಖ್ಖೇಳಿ, ಶೀಲಾ ಜಿ.ಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿಠಲ ಬಸಗುಂಡೆ, ಮಹಾದೇವಿ ಪಾಟೀಲ, ಮಾಣಿಕರಾವ ಹೊಸಳ್ಳಿ, ಬಸವರಾಜ್ ಪಾಟೀಲ, ದ್ರೌಪತಿ ಬಾಯಿ ಬೆಳಮಗಿ, ವಿಜಯಕುಮಾರ ಕಂದಗುಳ, ಶಕುಂತಲಾ ಬಾಯಿ ಭರಾಳೆ, ಈಶ್ವರಯ್ಯ ಸ್ವಾಮಿ, ಮಾರುತಿ ಖಂದಾರಿ, ಅಣ್ಣಾರಾವ್ ಪಾಟೀಲ, ಲಕ್ಷ್ಮಿ ಬಾಯಿ ಭರಾಳೆ, ಶಕುಂತಲಾ ಮುತ್ತಂಗಿ, ಶೀವರಾಜ್ ಚೀನಕೇರಾ, ಶಶಿಕಾಂತ ಗವಾಸ್ಕರ್, ಪಿಡಿಒ ಜಗದೇವಿ ಅವರು ಇದ್ದರು. ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶರದ ನಾರಾಯಣಪೇಟಕರ್ ಸ್ವಾಗತಿಸಿದರು. ಸುದರ್ಶನ ನಿರೂಪಿಸಿದರು. ಶೀಲಾ ಸ್ವಾಮಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry