ಸಚಿವರಿಂದ ಮಹದಾಯಿ ನಾಟಕ: ಆರೋಪ

7

ಸಚಿವರಿಂದ ಮಹದಾಯಿ ನಾಟಕ: ಆರೋಪ

Published:
Updated:
ಸಚಿವರಿಂದ ಮಹದಾಯಿ ನಾಟಕ: ಆರೋಪ

ಗದಗ: ‘ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಸೇರಿ ಇಡೀ ಕಾಂಗ್ರೆಸ್‌ಗೆ ಈ ಬಾರಿ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ, ಮಹದಾಯಿ ವಿಷಯದಲ್ಲಿ ಬಿಜೆಪಿ ಮೋಸ ಮಾಡಿದೆ ಎಂದು ಸಚಿವರು ಹೇಳಿಕೆ ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

‘ಬಿ.ಎಸ್‌. ಯಡಿಯೂಪ್ಪ ಅವರು ಗೋವಾ ಮುಖ್ಯಮಂತ್ರಿ ಮನವೊಲಿಸಿ ಒಪ್ಪಿಗೆ ಪತ್ರವನ್ನು ತಂದಿದ್ದರು. ಅದರ ಆಧಾರದ ಮೇಲೆ, ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಪಾರದರ್ಶಕ ಹಾಗೂ ಸೌಹಾರ್ದಯುತ ಪ್ರಯತ್ನ ಮಾಡುವುದನ್ನು ಬಿಟ್ಟು ಅದಕ್ಕೆ ಕಲ್ಲು ಹಾಕುತ್ತಿದ್ದೀರಿ. ಬಿಜೆಪಿ ವಿರುದ್ಧ ಜನರನ್ನು ಎತ್ತಿ ಕಟ್ಟುವ ನಾಟಕ ಆಡುತ್ತಿದ್ದೀರಿ’ ಎಂದು ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘4 ದಶಕಗಳಿಂದ ಒಂದಲ್ಲ ಒಂದು ರೀತಿ ಅಧಿಕಾರದಲ್ಲಿದ್ದು, ಗದುಗಿನ ಜನತೆಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರನ್ನು ಕೊಡಿಸಲು ಆಗದ ಸಚಿ ಪಾಟೀಲ ತಮ್ಮ ಜವಾಬ್ದಾರಿ ಹಾಗೂ ಕಾರ್ಯಕ್ಷಮತೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಸಂಕನೂರ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry