ಲಿಂಗೈಕ್ಯ ರುದ್ರಮುನಿ ಶ್ರೀಗಳ ಭಾವಚಿತ್ರ ಮೆರವಣಿಗೆ

7

ಲಿಂಗೈಕ್ಯ ರುದ್ರಮುನಿ ಶ್ರೀಗಳ ಭಾವಚಿತ್ರ ಮೆರವಣಿಗೆ

Published:
Updated:

ಶಿಗ್ಗಾವಿ: ಪಟ್ಟಣದ ಭಾವೀಸ್‌ಮಹಲ್ ಕಟ್ಟಿಮನಿ ಅರಳೆಲೆಹಿರೇಮಠದಲ್ಲಿ ರುದ್ರಮುನಿ ಶಿವಾಚಾರ್ಯರ 44ನೇ ವರ್ಷದ ಪುಣ್ಯಸ್ಮರಣೆ ಮಹೋತ್ಸವದ ನಿಮಿತ್ತ ಶುಕ್ರವಾರ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಮಳಲಿಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ, ‘ರುದ್ರಮುನಿ ಶಿವಾಚಾರ್ಯ ಶ್ರೀಗಳು ಅಗಾದ ಜ್ಞಾನದಿಂದ ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದರು. ಅವರ ಆದರ್ಶ ವಿಚಾರಗಳು ಭಕ್ತರು ಅಳವಡಿಸಿಕೊಳ್ಳಬೇಕು’ ಎಂದರು.

ಅರಳಲೆಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ‘ಶ್ರೀಮಠ ಕೃಷಿ ಪ್ರಧಾನವಾಗಿದ್ದು, ರೈತಪರ, ಕೃಷಿಪರ ಚಿಂತನೆಗಳನ್ನು ಶ್ರೀಗಳು ಹೊಂದಿದ್ದು, ಅದೇ ಪರಂಪರೆ ಈಗಲೂ ಮಠದಲ್ಲಿ ಸಾಗಿ ಬರುತ್ತಿದೆ’ ಎಂದರು.

ಶುಕರವಾರ ಬೆಳಿಗ್ಗೆ ಮಠದಲ್ಲಿ ಶ್ರೀಗಳ ಗದ್ಗುಗೆಗೆ ಮಹಾರುದ್ರಾಭಿಷೇಕ, ಮಹಾಗಣರಾದನೆ, ರುದ್ರಮುನೀಶ್ವರ ಸಂಗೀತ ಪಾಠ ಶಾಲೆ ಮಕ್ಕಳಿಂದ ಭರತ ನಾಟ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶ್ರೀಗಳ ಭಾವಚಿತ್ರ ಮೆರವಣಿಗೆ ಕರಡಿ ಕುಣಿತ, ಭಜನೆ, ಗೊಬ್ಬೆ ಕುಣಿತ ಸೇರಿದಂತೆ ವಿವಿಧ ಕಲಾ ಮೇಳಗಳೂಂದಿಗೆ ವೈಭವಯುತವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮೆರವಣಿಗೆಯ್ದೊಕ್ಕೂ ಭಕ್ತರ ಭಕ್ತಿಯ ಜಯ ಘೋಷಣೆಗಳು ರಾರಾಜಿಸಿದವು. ಮುಕ್ತಿಮಂದಿರದ ಆನೆ ಮೆರವಣಿಗೆಗೆ ವಿಶೇಷ ಮೆರಗು ತಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry