ಇದು ರಂಗೋಲಿ ಹಬ್ಬ

7

ಇದು ರಂಗೋಲಿ ಹಬ್ಬ

Published:
Updated:
ಇದು ರಂಗೋಲಿ ಹಬ್ಬ

ಚುಕ್ಕಿಗಳೊಳಗಣ ರೇಖೆ, ರೇಖೆಗಳೊಳಗಣ ಚಿತ್ತಾರ, ಚಿತ್ತಾರದೊಳಗಣ ರಂಗು, ಮನಸು ಕಣ್ಣು, ಕೈಯೊಳಗೆ ಆಡುವ ಕಲೆಯೇ ರಂಗೋಲಿ, ದೇವರ ತಲೆ ಮೇಲೊಂದು ಹೂವು, ಮನೆ ಬಾಗಿಲಿಗೊಂದು ರಂಗೋಲಿ... –ಹೌದಲ್ಲವೇ? ಹಬ್ಬವನ್ನು ಮನೆಗೆ ಬರಮಾಡಿಕೊಳ್ಳುವ ಸೇತುವೆ ಈ ರಂಗೋಲಿ.

ಈ ಚಿತ್ತಾರಗಳು ದೇಶದೆಲ್ಲೆಡೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಕರ್ನಾಟಕದಲ್ಲಿ ರಂಗೋಲಿ, ಚತ್ತೀಸ್‌ಗಡದಲ್ಲಿ ಛಾಊಕ್‌ಪೂರ್ಣ, ರಾಜಸ್ಥಾನದಲ್ಲಿ ಮಂದನಾ, ಬಿಹಾರದಲ್ಲಿ ಅರಿಪನ್, ಪಶ್ಚಿಮ ಬಂಗಾಳದಲ್ಲಿ ಅಲ್ಪೋನಾ, ತಮಿಳುನಾಡಿನಲ್ಲಿ ಕೋಲಮ್, ಆಂಧ್ರದಲ್ಲಿ ಮುಗ್ಗು, ಕೇರಳದಲ್ಲಿ ಗೋಲಮ್, ಗುಜರಾತಿನಲ್ಲಿ ಸತಿಯಾ ಹೀಗೆ...

ಸುಗ್ಗಿಯ ರಂಗೋಲಿಗೆ ಅದೆಷ್ಟು ಹೆಸರು. ಚಿತ್ತಾರವೂ ಪ್ರಾದೇಶಿಕತೆಗೆ ಅನುಗುಣವಾಗಿ ಬದಲಾಗುವುದು ಮತ್ತೊಂದು ವಿಶೇಷ.

ಸಂಕ್ರಾಂತಿ ಹಬ್ಬದಲ್ಲಿ ಚುಕ್ಕಿ ರಂಗೋಲಿಗಳಿಗಿಂತ ಬಳ್ಳಿ, ವೃತ್ತಾಕಾರದ ರಂಗೋಲಿಗಳಿಗೇ ಆದ್ಯತೆ. ಹಬ್ಬದ ವಿಶೇಷತೆ ಸೂಚಿಸುವ ಮಡಕೆ, ಕಬ್ಬು, ನವಿಲು, ಲಕ್ಷ್ಮಿ , ಆನೆಯ ಚಿತ್ತಾರಗಳು. ಒಟ್ಟಿನಲ್ಲಿ ರಂಗೋಲಿಯಲ್ಲಿಯೂ ಸಮೃದ್ಧಿಯ ಛಾಯೆ. ರಂಗೋಲಿ ವಿನ್ಯಾಸಕ್ಕೆ ಈಗ ಕಲಾತ್ಮಕತೆಯ ಮೆರುಗೂ ಇದೆ.

ಹೆಂಗಳೆಯರ ಕ್ರಿಯಾಶೀಲತೆಯನ್ನು ಜಾಹೀರು ಮಾಡಲು ರಂಗೋಲಿ ಸುಲಭ ಮಾರ್ಗ‌‌. ಹೂವಿನ ದಳ, ಅಕ್ಕಿ ಹಿಟ್ಟು, ದೀಪ, ಬಣ್ಣ ಬಣ್ಣದ ಮರಳಿನ ಪುಡಿ, ಅರಿಸಿನ, ಕುಂಕುಮ, ದವಸ–ಧಾನ್ಯ, ಒಣಹಣ್ಣು ಹೀಗೆ ಯಾವುದೇ ಸಾಮಗ್ರಿಯಿಂದ ರಂಗೋಲಿ ಬಿಡಿಸಿ ಚಮತ್ಕಾರ ತೋರಬಹುದು.

ಸಣ್ಣಸಣ್ಣ ಎಳೆಯ ರಂಗೋಲಿಯ ಸುತ್ತ ದೀಪಾಲಂಕಾರ ಮಾಡಿದರೆ ದೀಪದ ರಂಗೋಲಿ ಆಗುತ್ತದೆ. ಒಣಹಣ್ಣು ಅಥವಾ ಹಣ್ಣುಗಳ ರಂಗೋಲಿಯನ್ನು ಕೆಲವರು ದೇವರಮನೆಯಲ್ಲಿ ಹಾಕುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry