ಕಾಂಗ್ರೆಸ್‌ ತಮಾಷೆ ಟ್ವೀಟ್‌ಗೆ ಬಿಜೆಪಿ ಕೆಂಗಣ್ಣು

5

ಕಾಂಗ್ರೆಸ್‌ ತಮಾಷೆ ಟ್ವೀಟ್‌ಗೆ ಬಿಜೆಪಿ ಕೆಂಗಣ್ಣು

Published:
Updated:
ಕಾಂಗ್ರೆಸ್‌ ತಮಾಷೆ ಟ್ವೀಟ್‌ಗೆ ಬಿಜೆಪಿ ಕೆಂಗಣ್ಣು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ವಿವಿಧ ರಾಷ್ಟ್ರಗಳ ನಾಯಕರನ್ನು ಅಪ್ಪುವ ಚಿತ್ರಗಳನ್ನು ಜೋಡಿಸಿದ ವಿಡಿಯೊವನ್ನು ತಮಾಷೆಯ ಅಡಿ ಬರಹದೊಂದಿಗೆ ಕಾಂಗ್ರೆಸ್‌ ಪಕ್ಷವು ಭಾನುವಾರ ಪ್ರಕಟಿಸಿದೆ.

ಈ ವಿಡಿಯೊ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದು, ಇದು ಪ್ರಧಾನಿ ಮೋದಿ ಮತ್ತು ಜಗತ್ತಿನ ನಾಯಕರಿಗೆ ಮಾಡಿದ ಅವಮಾನ ಎಂದು ಕೇಂದ್ರದ ಇಬ್ಬರು ಸಚಿವರು ಹರಿಹಾಯ್ದಿದ್ದಾರೆ.

‘ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಂದ ನಾವು ಇನ್ನಷ್ಟು ಅಪ್ಪುಗೆಗಳನ್ನು ನಿರೀಕ್ಷಿಸುತ್ತೇವೆ! #ಹಗ್‌ಪ್ಲೊಮಸಿ’ ಎಂಬ ಅಡಿ ಬರಹದಲ್ಲಿ ಒಂದು ನಿಮಿಷ ನಾಲ್ಕು ಸೆಕೆಂಡ್‌ಗಳ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಮೋದಿ ಅವರು ನೆತನ್ಯಾಹು ಸೇರಿದಂತೆ ವಿವಿಧ ಜಾಗತಿಕ ನಾಯಕರನ್ನು ಅಪ್ಪಿಕೊಂಡಿರುವ ವಿವಿಧ ಭಂಗಿಯ ಚಿತ್ರಗಳು ವಿಡಿಯೊದಲ್ಲಿವೆ. ಪ್ರತಿ ಚಿತ್ರಕ್ಕೂ ತಮಾಷೆಯ ಒಕ್ಕಣೆಯನ್ನೂ ನೀಡಲಾಗಿದೆ.

ಇಸ್ರೇಲ್‌ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ ದಿನವೇ ಈ ವಿಡಿಯೊವನ್ನು ಕಾಂಗ್ರೆಸ್‌ ಹರಿಯಬಿಟ್ಟಿದೆ.

ಸಚಿವರ ಕೆಂಡ: ವಿಡಿಯೊ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ‘ಕಾಂಗ್ರೆಸ್‌ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತದೆ. ಈ ಟ್ವೀಟ್‌ ಅವರ ಅಪ್ರಬುದ್ಧತೆ ಮತ್ತು ರಾಜಕೀಯ ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತದೆ. ಇದನ್ನು ನಾವು ಖಂಡಿಸುತ್ತೇವೆ. ಮುಂದೊಂದು ದಿನ ಅವರಿಗೆ ಜ್ಞಾನೋದಯ ಆಗಬಹುದು’ ಎಂದು ಹೇಳಿದ್ದಾರೆ.

‘ಈ ಟ್ವೀಟ್‌ ಕಾಂಗ್ರೆಸ್ಸಿಗರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಮತ್ತೊಬ್ಬ ಸಚಿವ ಬಾಬೂಲ್‌ ಸುಪ್ರಿಯೊ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry