ಒಂಟಿ ಸಲಗ ದಾಳಿಗೆ ಬಾಲಕ ಬಲಿ

7

ಒಂಟಿ ಸಲಗ ದಾಳಿಗೆ ಬಾಲಕ ಬಲಿ

Published:
Updated:

ಆಲೂರು: ಸಂಕ್ರಾಂತಿ ಹಬ್ಬಕ್ಕೆಂದು ತಾಲ್ಲೂಕಿನ ಕೊಡಗತ್ತವಳ್ಳಿಯ ಅಜ್ಜಿ ಮನೆಗೆ ಬಂದಿದ್ದ ಬಾಲಕನ ಮೇಲೆ ಭಾನುವಾರ ಒಂಟಿ ಸಲಗ ದಾಳಿ ನಡೆಸಿ ಸಾಯಿಸಿದೆ.

ಹಾಸನದ ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಭರತ್ (14) ಜೀವ ಕಳೆದುಕೊಂಡ ನತದೃಷ್ಟ ಬಾಲಕ. ಬೆಳಿಗ್ಗೆ ಎದ್ದು ಮನೆ ಪಕ್ಕ ಕಟ್ಟಿದ್ದ ಕರುವಿನೊಂದಿಗೆ ಭರತ್ ಆಟವಾಡುತ್ತಿದ್ದಾಗ, ಏಕಾಏಕಿ ಬಂದ ಸಲಗ ಸೊಂಡಿಲಲ್ಲಿ ಬಾಲಕನನ್ನು ಎಳೆದೊಯ್ದು ತುಳಿದು ಸಾಯಿಸಿದೆ. ಸ್ಥಳೀಯರು ರಕ್ಷಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಮೊಮ್ಮಗನ ಶವದ ಎದುರು ಗೋಳಾಡುತ್ತಿದ್ದ ಅಜ್ಜಿಯ ಆಕ್ರಂದನ ನೆರೆದಿದ್ದವರ ಕಣ್ಣಾಲಿ

ಗಳನ್ನು ತೇವವಾಗಿಸಿದವು.

ಹಾಸನದ ಕೆಇಬಿ ಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕನ ತಂದೆ ಸುರೇಶ್, ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿ

ಕೊಂಡಿದ್ದರು. ಅನುಕಂಪದ ಆಧಾರದ ಮೇಲೆ ಸುರೇಶ್ ಕೆಲಸ ಆತನ ಪತ್ನಿ ಚಂದ್ರಮತಿಗೆ ಸಿಕ್ಕಿತ್ತು. ಹೀಗಾಗಿ ತಾಯಿ ಹಾಗೂ ತಂಗಿಯೊಂದಿಗೆ ವಾಸ

ವಿದ್ದ ಭರತ್, ಸಂಕ್ರಾಂತಿ ಹಬ್ಬಕ್ಕಾಗಿ ಶನಿವಾರವಷ್ಟೇ ಅಜ್ಜಿ ಮನೆಗೆ ತೆರಳಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry