ಅನಾರೋಗ್ಯದ ನಡುವೆ ಬಹುರೂಪಿಗೆ ಚಾಲನೆ ನೀಡಿದ ಕಾರ್ನಾಡ

7

ಅನಾರೋಗ್ಯದ ನಡುವೆ ಬಹುರೂಪಿಗೆ ಚಾಲನೆ ನೀಡಿದ ಕಾರ್ನಾಡ

Published:
Updated:
ಅನಾರೋಗ್ಯದ ನಡುವೆ ಬಹುರೂಪಿಗೆ ಚಾಲನೆ ನೀಡಿದ ಕಾರ್ನಾಡ

ಮೈಸೂರು: ಮೈಸೂರು ರಂಗಾಯಣ ಆಯೋಜಿಸಿರುವ ‘ಬಹುರೂಪಿ’ ರಾಷ್ಟ್ರೀಯ ರಂಗೋತ್ಸವವನ್ನು ಭಾನುವಾರ ಅನಾರೋಗ್ಯದ ನಡುವೆಯೇ ಸಾಹಿತಿ ಗಿರೀಶ ಕಾರ್ನಾಡ ಉದ್ಘಾಟಿಸಿದರು.

ರಂಗಾಯಣದ ಛಾಯಾಚಿತ್ರ ಪ್ರದರ್ಶನದ ವೇಳೆ ತೀವ್ರವಾಗಿ ಬಳಲಿದ ಅವರು ಕೆಲಕಾಲ ಕಲಾಮಂದಿರದ ಆವರಣದಲ್ಲಿ ಕುಳಿತು ವಿಶ್ರಾಂತಿ ಪಡೆದರು. ಉದ್ಘಾಟನೆ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದರು. ಇತರ ಗಣ್ಯರು ಚಿತ್ರಪ್ರದರ್ಶನ ಉದ್ಘಾಟಿಸಿ ಬಂದ ಬಳಿಕ ಕಾರಿನಲ್ಲಿ ಅವರನ್ನು ವನರಂಗದ ವೇದಿಕೆಗೆ ಕರೆತರಲಾಯಿತು.

ಹಾಸ್ಯ ಚಟಾಕಿ:

ಬಳಲಿಕೆ ನಡುವೆಯೂ ಮಾತನಾಡಿದ ಗಿರೀಶ ಕಾರ್ನಾಡ, ‘ನನ್ನ ಶ್ವಾಸಕೋಶ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಆಕ್ಸಿಜನ್ ಕಿಟ್‌ನೊಂದಿಗೆ ಓಡಾಡಬೇಕಿದೆ. ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಪಾತ್ರ ಮಾಡುವ ಅವಕಾಶ ಬಂದಾಗ ನನ್ನ ಅಸಹಾಯಕ ಸ್ಥಿತಿಯನ್ನು ನಿರ್ದೇಶಕರಿಗೆ ವಿವರಿಸಿದೆ. ಅವರು ಉಸಿರಾಟದ ಸಮಸ್ಯೆ ಇರುವ ಪಾತ್ರವನ್ನು ಸೃಷ್ಟಿಸಿದರು. ಈಗ ಇಲ್ಲಿಗೆ ಆಕ್ಸಿಜನ್‌ ಕಿಟ್‌ನೊಂದಿಗೆ ಉದ್ಘಾಟನೆಗೆಂದು ಬಂದರೆ, ‘ಸ್ನೇಹಿತರು ನೀವು ಮೇಕಪ್‌ ಇಲ್ಲದೆ ಹೊರಗೆ ಬರುವುದಿಲ್ಲವೇ ಎಂದು ಕೇಳಿದರು’ ಎಂದು ಚಟಾಕಿ ಹಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry