ತಾಯಿ ಸಾವಿನ ಸುದ್ದಿ ಕೇಳಿ ಪ್ರೇಮಿಗಳ ಆತ್ಮಹತ್ಯೆ

7

ತಾಯಿ ಸಾವಿನ ಸುದ್ದಿ ಕೇಳಿ ಪ್ರೇಮಿಗಳ ಆತ್ಮಹತ್ಯೆ

Published:
Updated:

ಹುಲಿಯೂರುದುರ್ಗ: ಗೆಳೆಯನ ಜೊತೆ ಮನೆ ಬಿಟ್ಟು ಹೋದ ಕಾರಣ ತಾಯಿ ಸಾವಿಗೀಡಾದರು ಎಂದು ನೊಂದು ಮಗಳು ಮತ್ತು ಆಕೆಯ ಪ್ರಿಯಕರ ಇಬ್ಬರೂ ನೇಣು ಹಾಕಿಕೊಂಡು ಮೃತಪಟ್ಟಿರುವ ಪ್ರಕರಣ ನಡೆದಿದೆ.

ಪ್ರಾಥಮಿಕ ಶಾಲಾ ಶಿಕ್ಷಕ ಲಕ್ಷ್ಮಯ್ಯ ಅವರ ಮಗಳು ಬಿ.ಕಾಂ. ಪದವೀಧರೆ ದಿವ್ಯಾ (22) ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಸ್ವಜಾತಿಯ ತನ್ನ ಪ್ರಿಯಕರ ಹಳೇವೂರು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್, ಸಂತೆ ಮಾವತ್ತೂರು ಗ್ರಾಮದ ವೇಣುಗೋಪಾಲ್ (27) ಜತೆ ಶನಿವಾರ ಬೆಳಿಗ್ಗೆ ಮನೆಬಿಟ್ಟು ಹೋಗಿದ್ದರು.  ಮಗಳು ಮನೆ ಬಿಟ್ಟು ಹೋಗಿದ್ದನ್ನು ಅರಿತು ತಾಯಿ ಶಾಂತಮ್ಮ (48) ಅವರು ತೀವ್ರ ಆಘಾತಕ್ಕೆ ಒಳಗಾಗಿ ಶನಿವಾರ ಮಧ್ಯಾಹ್ನ ಸಾವಿಗೀಡಾಗಿದ್ದರು. ಅಂದೇ ಸಂಜೆ ಶಾಂತಮ್ಮ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು.

ಬೆಂಗಳೂರಿನ ಕುಂಬಳಗೋಡಿನ ಸ್ನೇಹಿತನ ಮನೆಯಲ್ಲಿದ್ದ ದಿವ್ಯಾ ಮತ್ತು ವೇಣುಗೋಪಾಲ್ ತಾಯಿಯ ಸಾವಿನ ಸುದ್ದಿ ಕೇಳಿ ನೊಂದು ಭಾನುವಾರ ಬೆಳಿಗ್ಗೆ ತಾವು ತಂಗಿದ್ದ ಸ್ನೇಹಿತನ ಮನೆಯಲ್ಲಿ ಸಾವಿಗೀಡಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry