ಚೆಳಿಕೆರೆಯಲ್ಲಿ ಸಿದ್ಧರಾಮೇಶ್ವರ ಜಯಂತಿ

7

ಚೆಳಿಕೆರೆಯಲ್ಲಿ ಸಿದ್ಧರಾಮೇಶ್ವರ ಜಯಂತಿ

Published:
Updated:
ಚೆಳಿಕೆರೆಯಲ್ಲಿ ಸಿದ್ಧರಾಮೇಶ್ವರ ಜಯಂತಿ

ಬೆಂಗಳೂರು: ಭೋವಿ ಜನಾಂಗದ ಒಕ್ಕೂಟದ ವತಿಯಿಂದ ಕೆ.ಆರ್.ಪುರ ಕ್ಷೇತ್ರದ ಚೆಳಿಕೆರೆಯಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.

ಶಿವಶರಣರಲ್ಲಿ ಒಬ್ಬರಾದ ಸಿದ್ಧರಾಮೇಶ್ವರ ಅವರು ಕರ್ಮಯೋಗದಿಂದ ಪ್ರಸಿದ್ಧಿ ಪಡೆದ ಮಹಾನ್‌ ಪುರುಷ. ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ವಚನಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ್ದರು ಎಂದು ಶಾಸಕ ಬಿ.ಎ.ಬಸವರಾಜು ಹೇಳಿದರು.

ಭೋವಿ ಸಮುದಾಯದವರು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದರು.

ಕನ್ನಂಬಾಡಿ ಕಟ್ಟೆ, ಮೈಸೂರು ಅರಮನೆ ಹಾಗೂ ದೇವಾಲಯಗಳನ್ನು ನಿರ್ಮಿಸುವಲ್ಲಿ ಭೋವಿ ಜನಾಂಗದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry