ಇದೇ 25ರಂದು ‘ಪದ್ಮಾವತ್’ ತೆರೆಗೆ

7

ಇದೇ 25ರಂದು ‘ಪದ್ಮಾವತ್’ ತೆರೆಗೆ

Published:
Updated:
ಇದೇ 25ರಂದು ‘ಪದ್ಮಾವತ್’ ತೆರೆಗೆ

ಮುಂಬೈ: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರವು ‘ಪದ್ಮಾವತ್’ ಶೀರ್ಷಿಕೆಯಲ್ಲಿ ಇದೇ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ಮಿಸಿದ ವಯಾಕಾಮ್18 ಮೋಷನ್ ಪಿಕ್ಚರ್ಸ್ ಸಂಸ್ಥೆ ತಿಳಿಸಿದೆ.

‘ಪದ್ಮಾವತ್ ಅಕ್ಷರಶಃ ಅದ್ಭುತ ಸಿನಿಮಾ. ಅಭಿಮಾನಿಗಳ ನಿರೀಕ್ಷೆ ಮೀರಿ ಚಿತ್ರ ಯಶಸ್ವಿಯಾಗಲಿದೆ. ಸಿನಿಮಾಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಂಶು ವತ್ಸ್ ತಿಳಿಸಿದ್ದಾರೆ.

ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ‘ಜಾಗತಿಕ ಐಮ್ಯಾಕ್ಸ್ 3ಡಿ ತಂತ್ರಜ್ಞಾನ ಹೊಂದಿರುವ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ’ ಎಂದು ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಚಿತ್ರದಲ್ಲಿ ಐದು ಬದಲಾವಣೆಗಳನ್ನು ಮಾಡಲಾಗಿದ್ದು, ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಚಿತ್ರ ಬಿಡುಗಡೆಗೆ ರಜಪೂತ ಕರ್ಣಿ ಸೇನಾ ವಿರೋಧ ವ್ಯಕ್ತಪಡಿಸಿದೆ.

ರಜಪೂತ ಕಥೆಗಳಿಗೆ ಸಲ್ಲಿಸಿದ ಗೌರವ: ಬನ್ಸಾಲಿ

‘ಪದ್ಮಾವತ್’ ಸಿನಿಮಾವು ರಜಪೂತ ಕಥೆಗಳಿಗೆ ನಾನು ಸಲ್ಲಿಸಿದ ಗೌರವ’ ಎಂದು ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಹೇಳಿದ್ದಾರೆ.

‘ಇದು ನನ್ನ ಕನಸನ್ನು ನನಸಾಗಿಸಿದ ಸಿನಿಮಾ. ರಜಪೂತ ಯೋಧರ ಶೌರ್ಯ, ಘನತೆ ಮತ್ತು ಚುರುಕುತನವನ್ನು ನಮ್ಮ ಕಥೆಗಳಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅಂಥ ಕಥೆಗಳಿಗೆ ನಾನು ಸಲ್ಲಿಸುತ್ತಿರುವ ಗೌರವಾರ್ಪಣೆ ಈ ಸಿನಿಮಾ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry