ಮಂಜುನಾಯಕಗೆ ಟೊ‌ಟೊ ಪ್ರಶಸ್ತಿ

7

ಮಂಜುನಾಯಕಗೆ ಟೊ‌ಟೊ ಪ್ರಶಸ್ತಿ

Published:
Updated:
ಮಂಜುನಾಯಕಗೆ ಟೊ‌ಟೊ ಪ್ರಶಸ್ತಿ

ಬೆಂಗಳೂರು: ‘ಟೊಟೊ ಫಂಡ್ಸ್ ದಿ ಆರ್ಟ್ಸ್’ (ಟಿ.ಎಫ್.ಎ) ಸಂಸ್ಥೆ ನೀಡುವ ‘ಟೊಟೊ ಪ್ರಶಸ್ತಿ’ಗೆ ಈ ವರ್ಷ ಕನ್ನಡದ ಯುವ ಬರಹಗಾರ ಕೊಪ್ಪಳದ ಮಂಜುನಾಯಕ ಚಳ್ಳೂರು ಭಾಜನರಾಗಿದ್ದಾರೆ.

30,000 ನಗದು ಪುರಸ್ಕಾರವನ್ನು ಈ ಪ್ರಶಸ್ತಿ ಒಳಗೊಂಡಿದೆ. ವೆಲ್ಲಾನಿ ದಂಪತಿಗಳು ಕಿರಿಯ ವಯಸ್ಸಿನಲ್ಲಿಯೇ ತೀರಿಕೊಂಡ ತಮ್ಮ ಮಗನ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. ಈ ಬಾರಿಯ ಪ್ರಶಸ್ತಿಯನ್ನು ಭೂಮಿಜಾ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗಿದೆ.

ಪ್ರಶಸ್ತಿಯ ವಿವರ:

ಸಂಗೀತ ವಿಭಾಗದಲ್ಲಿ ನವದೆಹಲಿಯ ಪ್ರಭ್ ದೀಪ್ ಆಯ್ಕೆಯಾಗಿದ್ದು, ಈ ಪ್ರಶಸ್ತಿ ₹ 60,000 ನಗದು ಒಳಗೊಂಡಿದೆ.

ಇಂಗ್ಲಿಷ್ ಸೃಜನಶೀಲ ವಿಭಾಗದಲ್ಲಿ ನವದೆಹಲಿಯ ಮಾಯಾ ಪಲಿತ್ ಮತ್ತು ಗುರುಗ್ರಾಮದ ಊರ್ವಶಿ ಬಹುಗುಣ, ಛಾಯಾಚಿತ್ರ ವಿಭಾಗದಲ್ಲಿ ಮುಂಬೈನ ಐಶ್ವರ್ಯಾ ಅರುಂಬಕಂ ಮತ್ತು ನವದೆಹಲಿಯ ತಹ ಅಹ್ಮದ್ ಆಯ್ಕೆಯಾಗಿದ್ದಾರೆ.

ಕಿರುಚಿತ್ರ ವಿಭಾಗದಲ್ಲಿ ಪುಣೆಯ ಶ್ರೇಯಸ್ ದಶರಥೆ ಮತ್ತು ಮುಂಬೈನ ಕುಂಜಿಲಾ ಮಸ್ಕಿಲ್ಲಮನಿ ಆಯ್ಕೆಯಾಗಿದ್ದಾರೆ. ಈ ಮೂರು ವಿಭಾಗದ ಪ್ರಶಸ್ತಿಗಳು 30,000 ನಗದು ಒಳಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry