‘ವೀರ ಭೂಮಿ ವಂದನಾ’ ಧ್ವನಿಮುದ್ರಿಕೆ ಬಿಡುಗಡೆ

7

‘ವೀರ ಭೂಮಿ ವಂದನಾ’ ಧ್ವನಿಮುದ್ರಿಕೆ ಬಿಡುಗಡೆ

Published:
Updated:
‘ವೀರ ಭೂಮಿ ವಂದನಾ’ ಧ್ವನಿಮುದ್ರಿಕೆ ಬಿಡುಗಡೆ

ಬೆಂಗಳೂರು:  ಸುರ್‌ ನಮನ್‌ ಸಂಸ್ಥೆ ಹೊರ ತಂದಿರುವ ‘ವೀರ ಭೂಮಿ ವಂದನಾ’ ಧ್ವನಿಮುದ್ರಿಕೆಯನ್ನು ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ನಮನ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಬಿಡುಗಡೆ ಮಾಡಿದರು.

ಫ್ಲ್ಯಾಗ್ಸ್‌ ಆಫ್‌ ಆನರ್‌ ಪ್ರತಿಷ್ಠಾನವು ಸೈನಿಕ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಕೀರ್ತಿ ಕುಮಾರ್‌ ನೇತೃತ್ವದ ತಂಡದ ಸದಸ್ಯರು ಧ್ವನಿಮುದ್ರಿಕೆಯಲ್ಲಿರುವ ಗೀತೆಗಳನ್ನು ಹಾಡಿದರು.

ಧ್ವನಿಮುದ್ರಿಕೆಯು ಯೋಧರ ತ್ಯಾಗವನ್ನು ಶ್ಲಾಘಿಸುವ ಗೀತೆಗಳನ್ನು ಒಳಗೊಂಡಿದೆ. ಸಂಸ್ಥೆಯ ಸಂಸ್ಥಾಪಕ ಕೀರ್ತಿ ಕುಮಾರ್‌ ಅವರು ಹಳೆಯ 8 ದೇಶಭಕ್ತಿ ಗೀತೆಗಳಿಗೆ ಹೊಸದಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಇದರ ಮಾರಾಟದಿಂದ ಬರುವ ಹಣವನ್ನು ಸೈನಿಕರ ನಿಧಿಗೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದರ ಬೆಲೆ ₹200.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry