17ರಿಂದ ಸ್ವರಾಲಂಕಾರ ಉತ್ಸವ

7

17ರಿಂದ ಸ್ವರಾಲಂಕಾರ ಉತ್ಸವ

Published:
Updated:

ಬೆಂಗಳೂರು: ಭಾರತೀಯ ಸಾಮಗಾನ ಸಭಾ ವತಿಯಿಂದ ಇದೇ 17ರಿಂದ 21ರ ವರೆಗೆ ‘ಸ್ವರಾಲಂಕಾರ ಉತ್ಸವ’ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದು ಸಭಾ ಅಧ್ಯಕ್ಷ ಆರ್‌. ಆರ್‌. ರವಿಶಂಕರ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಟೀಲು ವಾದಕ ಡಾ. ಎಲ್‌. ಸುಬ್ರಹ್ಮಣ್ಯಂ ಅವರಿಗೆ ‘ಸಾಮಗಾನ ಮಾತಂಗ’ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ₹ 1 ಲಕ್ಷ ಒಳಗೊಂಡಿದ್ದು, ಆನೆಯ ಬೆಳ್ಳಿ ಪ್ರತಿಮೆಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುವುದು’ ಎಂದರು.

‘ಉದ್ಘಾಟನಾ ದಿನದಂದು ಎಲ್‌. ಸುಬ್ರಹ್ಮಣ್ಯಂ ಪುತ್ರ ಅಂಬಿ ಸುಬ್ರಹ್ಮಣ್ಯಂ ಅವರ ಪಿಟೀಲು ವಾದನ ಹಾಗೂ ಗಾಯಕಿ ಸಂಗೀತಾ ಕಟ್ಟಿ ಅವರ ಸಂತವಾಣಿಯ ಕಛೇರಿಗಳು ಇರಲಿವೆ. ಫ್ರಾನ್ಸ್‌ನ ಇಮ್ಯಾನುಯಲ್‌ ಮಾರ್ಟಿನ್‌, ಸುಷ್ಮಾ ಸೋಮಶೇಖರನ್‌, ಯೋಗ ಕೀರ್ತನ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry