ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಐ ಚಿಹ್ನೆಯ ಅರ್ಧ ಹೆಲ್ಮೆಟ್‌ ಸಹ ಕಾನೂನುಬದ್ಧ

ಬ್ಯೂರೊ ಆಫ್‌ ಇಂಡಿಯನ್ ಸ್ಟ್ಯಾಂಡರ್ಡ್ಸ್ ನ–ಬಿಐಎಸ್‌ ನಿಯಮಾವಳಿ
Last Updated 14 ಜನವರಿ 2018, 19:43 IST
ಅಕ್ಷರ ಗಾತ್ರ

ಮೋಟರ್ ಬೈಕ್, ಸ್ಕೂಟರ್, ಮೊಪೆಡ್‌ಗಳನ್ನು ಚಲಾಯಿಸುವಾಗ ಮತ್ತು ಹಿಂಬದಿ ಸವಾರರಾಗಿ ಪ್ರಯಾಣಿಸುವಾಗ ಧರಿಸಬೇಕಾದ ಹೆಲ್ಮೆಟ್‌ ಹೇಗಿರಬೇಕು ಎಂದು ‘ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್–ಬಿಐಎಸ್‌’ ಸ್ಪಷ್ಟವಾಗಿ ಹೇಳಿದೆ. ಹೆಲ್ಮೆಟ್‌ ಹೇಗಿರಬೇಕು ಎಂಬುದನ್ನು ‘ಐಎಸ್‌ 4151:1993’ ನಿಯಮಾವಳಿಯಲ್ಲಿ ವಿವರಿಸಲಾಗಿದೆ. ಅರ್ಧ ಹೆಲ್ಮೆಟ್‌ ಧರಿಸಿಯೂ ದ್ವಿಚಕ್ರ ವಾಹನಗಳನ್ನು ಚಲಾಯಿಸಬಹುದು ಎಂದು ಈ ನಿಯಮಾವಳಿಯಲ್ಲಿ ಇದೆ. ಆದರೆ ಅವುಗಳ ಮೇಲೆ ಐಎಸ್‌ಐ ಚಿಹ್ನೆ ಇರಬೇಕಷ್ಟೆ.

1989ರ ಮೋಟಾರು ವಾಹನ ಕಾಯ್ದೆ

* ಮೋಟರ್ ಬೈಕ್, ಸ್ಕೂಟರ್‌, ಮೊಪೆಡ್‌ಗಳನ್ನು ಚಲಾಯಿಸುವವರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕು.

* ನಾಲ್ಕು ವರ್ಷ ಮೇಲ್ಪಟ್ಟ ಎಲ್ಲ ಸವಾರರೂ ಹೆಲ್ಮೆಟ್ ಧರಿಸಬೇಕು

* ಹೆಲ್ಮೆಟ್‌ಗಳು ಬಿಐಎಸ್‌ ಸೂಚಿಸಿರುವ ಪರಿಮಾಣಕ್ಕೆ ಅನುಗುಣವಾಗಿದ್ದು, ಐಎಸ್‌ಐ ಚಿಹ್ನೆ ಹೊಂದಿರಬೇಕು

* ಪೇಟ ಧರಿಸಿರುವ ಸಿಖ್ ಪುರುಷ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕಿಲ್ಲ. ಆದರೆ ಸಿಖ್ ಮಹಿಳೆ ಹೆಲ್ಮೆಟ್ ಧರಿಸಬೇಕು

* ಹೆಲ್ಮೆಟ್‌ಗಳ ಹಿಂಭಾಗದಲ್ಲಿ ಕೆಂಪು ಬಣ್ಣದ ಮೂರು ಪ್ರತಿಫಲಕಗಳು ಇರಬೇಕು ಎಂದು ಕರ್ನಾಟಕ ಮೋಟಾರು ವಾಹನ ಕಾಯ್ದೆಯಲ್ಲಿ ವಿವರಿಸಲಾಗಿದೆ

* ಸ್ಕಲ್‌ ಹೆಲ್ಮೆಟ್‌ ಮತ್ತು ಇಯರ್‌ ಕವರ್‌ ಹೆಲ್ಮೆಟ್‌ಗಳು ಅಪಘಾತಗಳ ಸಂದರ್ಭಗಳಲ್ಲಿ ಕೆನ್ನೆ, ದವಡೆಗಳಿಗೆ ರಕ್ಷಣೆ ನೀಡುವುದಿಲ್ಲ ಎಂದು ಐಎಸ್‌ 4151:2015 ಕರಡು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಆ ಪ್ರಕಾರ ಹೆಲ್ಮೆಟ್‌ಗಳ ಮೇಲೆ ಈ ಬಗ್ಗೆ ಎಚ್ಚರಿಕೆ ಚಿಹ್ನೆ ಹಾಕಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT