ವಿದೇಶಿ ಹೂಡಿಕೆ ₹ 5,200 ಕೋಟಿ

7

ವಿದೇಶಿ ಹೂಡಿಕೆ ₹ 5,200 ಕೋಟಿ

Published:
Updated:

ನವದೆಹಲಿ: ವಿದೇಶ ಸಾಂಸ್ಥಿಕ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಜನವರಿ 12ರ ವರೆಗೆ ₹ 5,252 ಕೋಟಿ ಬಂಡವಾಳ ತೊಡಗಿಸಿದ್ದಾರೆ.

ಇದರಲ್ಲಿ ಷೇರುಗಳ ಮೇಲೆ ₹ 2,172 ಕೋಟಿ ಮತ್ತು ಸಾಲಪತ್ರಗಳ ಮೇಲೆ ₹ 3,080 ಕೋಟಿ ಹೂಡಿಕೆ ಮಾಡಿದ್ದಾರೆ.

‘ಮೂರನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಗಳಿಕೆ ಚೇತರಿಕೆ ಕಾಣಲಿದ್ದು, ಉತ್ತಮ ಲಾಭ ಬರುವ ಉದ್ದೇಶದಿಂದ ಹೂಡಿಕೆ ಮಾಡಲಾರಂಭಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೂಡಿಕೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಫೈನಾನ್ಸ್‌ ಕಂಪನಿಯ ಸಿಇಒ ದಿನೇಶ್‌ ರೋಹಿರಾ ಹೇಳಿದ್ದಾರೆ.

2017ರಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಒಟ್ಟಾರೆ ₹ 2 ಲಕ್ಷ ಕೋಟಿ ಹೂಡಿಕೆ ಮಾಡಿದ್ದರು.

ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಸಾಲದ ಮೇಲಿನ ಬಡ್ಡಿದರ ಏರಿಕೆ ಕಾಣಲಿದ್ದು, 2018ರಲ್ಲಿ ವಿದೇಶಿ ಹೂಡಿಕೆ ಪ್ರಮಾಣ ತಗ್ಗಲಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry