ಎಚ್‌ಪಿಎಲ್‌: ಟೈಗರ್ಸ್‌, ಮಾನ್‌ಸ್ಟರ್ಸ್‌ ಜಯಭೇರಿ

7

ಎಚ್‌ಪಿಎಲ್‌: ಟೈಗರ್ಸ್‌, ಮಾನ್‌ಸ್ಟರ್ಸ್‌ ಜಯಭೇರಿ

Published:
Updated:
ಎಚ್‌ಪಿಎಲ್‌: ಟೈಗರ್ಸ್‌, ಮಾನ್‌ಸ್ಟರ್ಸ್‌ ಜಯಭೇರಿ

ಹುಬ್ಬಳ್ಳಿ: ಮುಂಡಗೋಡ ಮಾನ್‌ಸ್ಟರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್‌ ತಂಡಗಳು ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯಗಳಲ್ಲಿ ಗೆಲುವು ಪಡೆದವು.

ರಾಜಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ನಡಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ ಮುಂಡಗೋಡ ತಂಡ ನೀಡಿದ್ದ 133 ರನ್ ಗುರಿ ಮುಟ್ಟಲು ಶಿರಸಿಯ ನಿಲೇಕಣಿ ಚಾಲೆಂಜರ್ಸ್‌ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ತಂಡ 19.3 ಓವರ್‌ಗಳಲ್ಲಿ 120 ರನ್‌ಗೆ ಆಲೌಟ್‌ ಆಯಿತು.

ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿಯ ಸ್ಕೈಟೌನ್‌ ಬ್ಯಾಷರ್ಸ್‌ ನೀಡಿದ್ದ 162 ರನ್ ಗುರಿಯನ್ನು ಹುಬ್ಬಳ್ಳಿ ಟೈಗರ್ಸ್‌

ಸುಲಭವಾಗಿ ಮುಟ್ಟಿತು. ಟೈಗರ್ಸ್ ತಂಡದ ಎಂ. ಕ್ರಾಂತಿಕುಮಾರ್‌ (ಔಟಾಗದೆ 99) ಮತ್ತು ವಿಠ್ಠಲ್‌ ಹಬೀಬ್‌ (ಔಟಾಗದೆ 62) ಮೊದಲ ವಿಕೆಟ್‌ಗೆ 165 ರನ್ ಜೊತೆಯಾಟವಾಡಿ ಜಯ ತಂದುಕೊಟ್ಟರು.

ಹೊನಲು ಬೆಳಕಿನಲ್ಲಿ ನಡೆದ ಧಾರವಾಡದ ಸ್ವರ್ಣ ಸ್ಟ್ರೈಕರ್ಸ್‌ ಮತ್ತು ಹುಬ್ಬಳ್ಳಿ ನೈಟ್ಸ್‌ ನಡುವಿನ ರೋಚಕ ಹೋರಾಟದಲ್ಲಿ ಸ್ಟ್ರೈಕರ್ಸ್ ತಂಡ 9 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿ ಸ್ಟ್ರೈಕರ್ಸ್‌ 164 ರನ್‌ ಗಳಿಸಿತ್ತು. ನೈಟ್ಸ್‌ ಬಳಗ ನಿಗದಿತ ಓವರ್‌ಗಳು ಮುಗಿದಾಗ 155 ರನ್‌ ಕಲೆ ಹಾಕಿ ತನ್ನ ಹೋರಾಟ ಮುಗಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry