ಶಾಲೆಯಲ್ಲಿ ಉಪವಾಸ, ಹಿಜಬ್‌: ಕ್ರಮಕ್ಕೆ ಆಗ್ರಹ

7
ಸ್ಪಷ್ಟ ನಿಲುವು ತಿಳಿಸಲು ಆಗ್ರಹ

ಶಾಲೆಯಲ್ಲಿ ಉಪವಾಸ, ಹಿಜಬ್‌: ಕ್ರಮಕ್ಕೆ ಆಗ್ರಹ

Published:
Updated:

ಲಂಡನ್‌: ವಿದ್ಯಾರ್ಥಿಗಳು ಹಿಜಬ್‌ ಧರಿಸುವುದು ಮತ್ತು ರಮ್ಜಾನ್‌ ಸಂದರ್ಭದಲ್ಲಿ ಉಪವಾಸ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಬ್ರಿಟನ್‌ ಸರ್ಕಾರದ ಅನುದಾನಿತ ಶಾಲೆಯೊಂದು ಸರ್ಕಾರವನ್ನು ಆಗ್ರಹಿಸಿದೆ.

ಇಲ್ಲಿನ ನ್ಯೂಹ್ಯಾಮ್‌ನಲ್ಲಿರುವ ಸೇಂಟ್‌ ಸ್ಟೀಫನ್ಸ್‌ ಶಾಲೆಯು 8 ವರ್ಷದ ಬಾಲಕಿಯರು ಹಿಜಬ್‌ ಧರಿಸುವುದನ್ನು ದೇಶದಲ್ಲೇ ಮೊದಲ ಬಾರಿಗೆ, 2016ರಲ್ಲಿ ನಿಷೇಧಿಸಿತ್ತು. ಈ ವರ್ಷದ ಸೆಪ್ಟೆಂಬರ್‌ ಹೊತ್ತಿಗೆ, ಇದನ್ನು 11 ವರ್ಷದವರೆಗಿನ ಬಾಲಕಿಯರಿಗೂ ವಿಸ್ತರಿಸಲು ಅದು ಉದ್ದೇಶಿಸಿದೆ.

ಶಾಲಾ ಆವರಣದಲ್ಲಿ ರಮ್ಜಾನ್ ಉಪವಾಸ ಆಚರಿಸುವುದರ ಮೇಲೂ ಈ ಶಾಲೆ ಕಠಿಣ ನಿರ್ಬಂಧಗಳನ್ನು ಹೇರಿದೆ.

ಅತ್ಯುತ್ತಮ ಶಾಲೆ ಎನಿಸಿಕೊಂಡಿರುವ ಇಲ್ಲಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

‘ಇದು ಕೇವಲ ನಮ್ಮ ನಿರ್ಧಾರ ಆಗಬಾರದು. ಸರ್ಕಾರ ಮುಂದಾಗಿ ಎಲ್ಲ ಶಾಲೆಗಳಿಗೂ ಈ ಸಂಬಂಧ ಆದೇಶ ಹೊರಡಿಸಬೇಕು’ ಎಂದು ಶಾಲೆಯ ಮುಖ್ಯಸ್ಥೆ, ಭಾರತ ಮೂಲದ ನೀನಾ ಲಲ್‌ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry