ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

7

ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

Published:
Updated:
ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ಹೊಸದುರ್ಗ: ಇಲ್ಲಿನ ಜನರಲ್‌ ಕಾರ್ಯಪ್ಪ ಸ್ಮಾರಕ ವಸತಿಯುತ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಶುಕ್ರವಾರ ಸ್ವಚ್ಛತಾ ಅಭಿಯಾನ ಮಾಡಿದರು.

ಅಯ್ಯಪ್ಪಸ್ವಾಮಿ ಬಡಾವಣೆಯಲ್ಲಿ ಬಿದಿದ್ದ ಕಸಕಡ್ಡಿ, ಬೆಳೆದಿದ್ದ ಕಾಡುಜಾತಿಯ ಗಿಡಗಂಟಿ ಹಾಗೂ ಪ್ಲಾಸ್ಟಿಕ್‌ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು.

‘ಪರಿಸರ ಸಂರಕ್ಷಿಸಿ ಜೀವಸಂಕುಲದ ಹಿತ ಕಾಪಾಡಿ, ಪರಿಸರದ ಶುಚಿತ್ವ ಆರೋಗ್ಯ ವೃದ್ಧಿಗೆ ಹಿತ, ಊರಿಗೊಂದು ಶಾಲೆ, ಶಾಲೆಗೊಂದು ವನ’ ಎಂಬ ಮಾಹಿತಿ ನೀಡುತ್ತಾ ಜನರಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ

ಮೂಡಿಸಿದರು.

ಕಾರ್ಯಕ್ರಮಕ್ಕೆ ಇಲ್ಲಿನ ಪುರಸಭೆ ಅಧ್ಯಕ್ಷ ಕೆ.ವಿ.ಸ್ವಾಮಿ ಚಾಲನೆ ನೀಡಿದರು. ಉಪಾಧ್ಯಕ್ಷೆ ಸವಿತಾ ರಮೇಶ್‌, ಸದಸ್ಯ ಡಿ.ವಿ.ಅಂಜನಕುಮಾರ್‌, ಪರಿಸರ ಎಂಜಿನಿಯರ್‌ ತಿಮ್ಮರಾಜು, ಜನರಲ್‌ ಕಾರ್ಯಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಸಂತಶೆಟ್ರು, ನಿರ್ದೇಶಕ ಗಂಗಾಧರ್ ಗುಪ್ತಾ, ಆಡಳಿತಾಧಿಕಾರಿ ಸಿ.ಪಿ.ಸತೀಶ್‌, ಮುಖ್ಯ ಶಿಕ್ಷಕ ಜಿ.ಲೋಕೇಶ್‌ ಅವರೂ

ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry