ಜಲ್ಲಿಕಟ್ಟು ವೀಕ್ಷಿಸುತ್ತಿದ್ದ ಯುವಕ ಹೋರಿ ತಿವಿತಕ್ಕೆ ಬಲಿ

7

ಜಲ್ಲಿಕಟ್ಟು ವೀಕ್ಷಿಸುತ್ತಿದ್ದ ಯುವಕ ಹೋರಿ ತಿವಿತಕ್ಕೆ ಬಲಿ

Published:
Updated:
ಜಲ್ಲಿಕಟ್ಟು ವೀಕ್ಷಿಸುತ್ತಿದ್ದ ಯುವಕ ಹೋರಿ ತಿವಿತಕ್ಕೆ ಬಲಿ

ಚೆನ್ನೈ: ಜಲ್ಲಿಕಟ್ಟು ವೀಕ್ಷಿಸುತ್ತಿದ್ದ 19 ವರ್ಷ ವಯಸ್ಸಿನ ಯುವಕನೊಬ್ಬ ಹೋರಿ ತಿವಿತದಿಂದ ಮೃತಪಟ್ಟ ಘಟನೆ ತಮಿಳುನಾಡಿನ ಪಾಲಮೇಡು ಜಿಲ್ಲೆಯಲ್ಲಿ ನಡೆದಿದೆ.

ಜಲ್ಲಿಕಟ್ಟು ಪಂದ್ಯ ಮುಗಿದ ಬಳಿಕ ಘಟನೆ ನಡೆದಿದೆ. ಪಂದ್ಯ ನಡೆಯುವ ಸ್ಥಳ ಮತ್ತು ವೀಕ್ಷಕರ ಜಾಗದ ಮಧ್ಯೆ ಎರಡೆರಡು ಬ್ಯಾರಿಕೇಡ್‌ಗಳ ತಡೆ ಇಡಲಾಗಿತ್ತಾದರೂ ವೀಕ್ಷಕನ ಮೇಲೆ ಹೋರಿ ದಾಳಿ ನಡೆಸಿದೆ.

ಭಾನುವಾರವೂ ತಮಿಳುನಾಡಿನ ಹಲವೆಡೆ ಜಲ್ಲಿಕಟ್ಟು ಆಯೋಜಿಸಲಾಗಿತ್ತು. ವಿವಿಧೆಡೆ ಸುಮಾರು 79 ಜನ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry