ಮನಗೆದ್ದ ಹಾಡು

7

ಮನಗೆದ್ದ ಹಾಡು

Published:
Updated:
ಮನಗೆದ್ದ ಹಾಡು

‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಲೇಜು ಯುವತಿಯಾಗಿ ಕಾಣಿಸಿಕೊಂಡಿದ್ದರು. ‘ಚಮಕ್‌’ನಲ್ಲಿ ಇದಕ್ಕೆ ವಿರುದ್ಧವೆಂಬಂತೆ ಆಧುನಿಕ ಮನೋಭಾವದ ಯುವತಿ ಪಾತ್ರ.

ಈಗ ತೆಲುಗಿನಲ್ಲಿ  ಅವರ ಮೊದಲ ಚಿತ್ರ ‘ಚಲೋ’ದ ‘ಚೂಸಿ ಚುಡಂಗಣೆ’ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಇದನ್ನು 40 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಇಲ್ಲಿಯೂ ಅವರದ್ದು ಕಾಲೇಜು ಹುಡುಗಿ ಪಾತ್ರ. ಗ್ಲಾಮರಸ್‌ ಆಗಿ, ಕನ್ನಡಕ ಹಾಕಿಕೊಂಡು, ಸ್ನೇಹಿತರ ಗುಂಪಿನಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಸಹಜ ಸುಂದರಿಯಾಗಿ ಮನಸೆಳೆಯುತ್ತಾರೆ. ನಾಯಕಿಯನ್ನು ಹಿಂಬಾಲಿಸುವ, ಕದ್ದು ಮುಚ್ಚಿ ಪ್ರೀತಿಸುವ ಪಾತ್ರ ನಾಗಶೌರ್ಯ ಅವರದ್ದು.

ಕಾಲೇಜು ಆವರಣದಲ್ಲಿ ಚಿತ್ರೀಕರಣ ನಡೆದಿದ್ದು, ನೆರಳು– ಬೆಳಕಿನ ಸಂಯೋಜನೆಯ ಛಾಯಾಗ್ರಹಣ ಹಾಡನ್ನು ಶ್ರೀಮಂತಗೊಳಿಸಿದೆ.

ಮಹತಿ ಸ್ವರ ಸಾಗರ ಸಂಗೀತ ನಿರ್ದೇಶನವಿದೆ. ಫೆಬ್ರುವರಿ 2ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ಸ್ಯಾಟಲೈಟ್‌ ಹಕ್ಕು ಈಗಾಗಲೇ 2.20 ಕೋಟಿಗೆ ಮಾರಾಟವಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಪ್ರದೇಶದ ಎರಡು ಗ್ರಾಮಗಳ ನಡುವಿನ ಹಳೆ ವೈಷಮ್ಯದ ಕತೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry