ಹಾಡಿನಿಂದ ಶಾಂತಿ

5

ಹಾಡಿನಿಂದ ಶಾಂತಿ

Published:
Updated:
ಹಾಡಿನಿಂದ ಶಾಂತಿ

ಬೇಸರವಾದಾಗ ಹಾಡು ಗುನುಗುವುದು, ಅಳುವ ಮಗು ಹಾಡು ಕೇಳಿ ಸುಮ್ಮನಾಗುವುದು ಸಾಮಾನ್ಯ ಸಂಗತಿ. ಆದರೆ ಈಗ ಪ್ರಸವದ ಮೊದಲ 40 ವಾರಗಳಲ್ಲಿ ಕಾಣಿಸಿಕೊಳ್ಳುವ ಖಿನ್ನತೆಗೂ ಹಾಡುವುದು ಮದ್ದು ಎಂದು ಸಂಶೋಧನೆಯೊಂದು ಸಾರಿ ಹೇಳಿದೆ.

ಬ್ರಿಟನ್‌ ಸೈಕಿಯಾಟ್ರಿ ಸೊಸೈಟಿಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದ ಪ್ರಕಾರ, ‘ಗುಂಪಿನಲ್ಲಿ ಹಾಡುವುದರಿಂದ ಪ್ರಸವದ ನಂತರ ಕಾಣಿಸಿಕೊಳ್ಳುವ ಖಿನ್ನತೆ ಬಹುಬೇಗ ಕಡಿಮೆಯಾಗುತ್ತದೆ’.

ಈ ಸಂಶೋಧನೆಗಾಗಿ ಸಣ್ಣಮಕ್ಕಳ ತಾಯಂದಿರನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿಗೂ ಪ್ರತ್ಯೇಕವಾಗಿ ಕೌಟುಂಬಿಕ ಆರೈಕೆ, ಸೃಜನಶೀಲ ಆಟಗಳು ಮತ್ತು ಸಾಮೂಹಿಕ ಹಾಡುಗಾರಿಕೆಯ ಚಟುವಟಿಕೆಗಳನ್ನು ನಡೆಸಲಾಯಿತು.

ಹಾಡುವವರ ಗುಂಪಿನಲ್ಲಿದ್ದ ಶೇ35ರಷ್ಟು ಮಂದಿ ಮೊದಲ ಆರು ವಾರಗಳಲ್ಲಿಯೇ ಖಿನ್ನತೆಗೆ ಗುಡ್‌ಬೈ ಹೇಳಿದ್ದು ಈ ಸಂದರ್ಭ ದಾಖಲಾಯಿತು.

‘ಪ್ರಸವಾನಂತರದ ಖಿನ್ನತೆಯು ತಾಯಂದಿರನ್ನು ದುರ್ಬಲಗೊಳಿಸುವುದರ ಜೊತೆಗೆ ಕೌಟುಂಬಿಕವಾಗಿಯೂ ಸಾಕಷ್ಟು ಸಮಸ್ಯೆಗಳು ಉಂಟುಮಾಡುತ್ತವೆ. ಹೀಗಾಗಿ ತಾಯಂದಿರು ತಮ್ಮ ಮಕ್ಕಳೊಂದಿಗೆ ಹಾಡುತ್ತಾ ಲಾಲನೆ ಪೋಷಣೆಯಲ್ಲಿ ತೊಡಗಿಕೊಂಡರೆ ಖಿನ್ನತೆಯಿಂದ ಬಹುಬೇಗನೆ ಹೊರಬರಬಹುದೇ ಎಂಬುದನ್ನು ಅರಿಯಲು ಅಧ್ಯಯನ ನಡೆಸಿದೆವು’ ಎಂದು ಸಂಶೋಧನೆಯ ಮುಖ್ಯ ಪರೀಕ್ಷಕರಾದ ರೋಸಿ ಪಾರ್ಕಿನ್ಸ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry