ಮೊಟ್ಟೆ ಸಿಪ್ಪೆಯ ಬಗೆಬಗೆ ಬಳಕೆ

5

ಮೊಟ್ಟೆ ಸಿಪ್ಪೆಯ ಬಗೆಬಗೆ ಬಳಕೆ

Published:
Updated:
ಮೊಟ್ಟೆ ಸಿಪ್ಪೆಯ ಬಗೆಬಗೆ ಬಳಕೆ

ಮೊಟ್ಟೆಯ ಒಳಭಾಗ ಎಷ್ಟು ಉಪಯುಕ್ತವೋ ಅಷ್ಟೇ ಉಪಯೋಗಕಾರಿ ಮೊಟ್ಟೆಯ ಸಿಪ್ಪೆ.

* ನೆಲ, ಪಾತ್ರೆ, ಥರ್ಮಸ್‌ ಮುಂತಾದವುಗಳ ಮೇಲಿರುವ ಗಾಢ ಕಲೆಯನ್ನು ತೆಗೆಯಲು ಇದು ಸಹಕಾರಿ. ಮೊಟ್ಟೆಯ ಚಿಪ್ಪನ್ನು ಪುಡಿ ಮಾಡಿ, ಸೋಪಿನ ಪೌಡರ್‌ ಸೇರಿಸಿದ ನೀರಿನೊಂದಿಗೆ ಹಾಕಿ ಇದನ್ನು ಬಳಸಬೇಕು. ಕಲೆ ಬೇಗ ಹೋಗುತ್ತದೆ

* ಪಾತ್ರೆ ತೊಳೆಯುವ ಸಿಂಕ್‌ ಸ್ಟೇನರ್‌ ಮೇಲೆ ಮೊಟ್ಟೆಯ ಚಿಪ್ಪನ್ನು ಹಾಕಬೇಕು. ಅವು ಹೆಚ್ಚಿನ ಕಸವನ್ನೂ ತನ್ನತ್ತ ಸೆಳೆದುಕೊಳ್ಳುತ್ತವೆ. ಚಿಪ್ಪು ನಿಧಾನವಾಗಿ ತುಂಡಾಗುತ್ತಾ ಕೆಳಗೆ ಹೋಗುವಾಗ ಪೈಪ್‌ ಸ್ವಚ್ಛವಾಗುತ್ತದೆ.

* ತೆಂಗಿನ ಚಿಪ್ಪಿನಲ್ಲಿ ಕ್ಯಾಲ್ಶಿಯಂ ಅಂಶ ಹೇರಳವಾಗಿರುತ್ತದೆ. ಹೀಗಾಗಿ ನಿಮ್ಮ ಕೈತೋಟಕ್ಕೆ ಇದನ್ನು ಬಳಸಬಹುದು. ಚಿಪ್ಪುಗಳನ್ನು ಚಿಕ್ಕದಾಗಿ ತುಂಡರಿಸಿ ಅವುಗಳನ್ನು ಗೊಬ್ಬರದಂತೆ ಬಳಸಿ.

* ಆಪಲ್‌ ಸೈಡರ್‌ ವಿನೆಗರ್‌ನಲ್ಲಿ ಮೊಟ್ಟೆಯ ಚಿಪ್ಪನ್ನು ಕೆಲವು ದಿನಗಳ ಕಾಲ ನೆನೆಯಲು ಬಿಡಿ. ಈ ಮಿಶ್ರಣವನ್ನು ತುರಿಕೆ, ಕಿರಿಕಿರಿ ಇರುವ ತ್ವಚೆಯ ಭಾಗಕ್ಕೆ ಹಚ್ಚಿಕೊಂಡರೆ ಒಳ್ಳೆಯದು.

* ಅರ್ಧ ತುಂಡರಿಸಿದ ಮೊಟ್ಟೆಯ ಚಿಪ್ಪಿನೊಳಗೆ ಮಣ್ಣು ತುಂಬಿಸಿ ಅದರಲ್ಲಿ ಒಂದು ಅಥವಾ ಎರಡು ಬೀಜಗಳನ್ನು ಹಾಕಬೇಕು. ಬೀಜ ಮೊಳಕೆಯೊಡೆದು ನೆಡುವಷ್ಟು ದೊಡ್ಡದಾದ ಮೇಲೆ ಚಿಪ್ಪನ್ನು ಒಡೆದು ಅದನ್ನೂ ಸೇರಿಸಿ ಮಣ್ಣಿನಲ್ಲಿ ನೆಡಬೇಕು. ಚಿಪ್ಪು ಜೈವಿಕ ವಿಘಟನೆ ಹೊಂದಿ ಗಿಡಕ್ಕೆ ಒಳ್ಳೆಯ ಪೋಷಕಾಂಶವಾಗುತ್ತದೆ.

* ಮೊಟ್ಟೆಯ ಚಿಪ್ಪುಗಳನ್ನು 30 ನಿಮಿಷಗಳ ಕಾಲ 250 ಡಿಗ್ರಿ ಉಷ್ಣದಲ್ಲಿ ಬಿಸಿ ಮಾಡಿ ಜಿಪ್ಪರ್‌ ಬ್ಯಾಗ್‌ನಲ್ಲಿ ಹಾಕಿ ಕಟ್ಟಿ. ನಂತರ ಅದನ್ನು ಪೌಡರ್‌ನಂತೆ ಆಗುವವರೆಗೆ ಪುಡಿ ಮಾಡಿ. ಈ ಪುಡಿಯನ್ನು ನಾಯಿಯ ಆಹಾರದೊಂದಿಗೆ ಸ್ವಲ್ಪ ಸ್ವಲ್ಪ ಹಾಕಿ. ನಾಯಿಯ ಮೂಳೆ ಹಾಗೂ ಹಲ್ಲಿನ ಆರೋಗ್ಯಕ್ಕೆ ಇದು ಉತ್ತಮ.

* ತರಕಾರಿ, ಹೂವು, ಹಣ್ಣುಗಳ ಮೇಲೆ ಮೊಟ್ಟೆಯ ಚಿಪ್ಪನ್ನು ಉದುರಿಸಿದರೆ ಅದರ ವಾಸನೆಗೆ ಹುಳುಗಳು ಹತ್ತಿರ ಬರುವುದಿಲ್ಲ.

* ನೀವು ಕ್ರಿಯಾಶೀಲರಾಗಿದ್ದರೆ ಮೊಟ್ಟೆಯ ಚಿಪ್‌ನಲ್ಲಿ ಕ್ಯಾಂಡಲ್‌ ಹೊತ್ತಿಸುವ ಪ್ರಯತ್ನವನ್ನೂ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry