ವರ್ಮಾ ಜೊತೆಗೆ ಮಿಯಾ

7

ವರ್ಮಾ ಜೊತೆಗೆ ಮಿಯಾ

Published:
Updated:
ವರ್ಮಾ ಜೊತೆಗೆ ಮಿಯಾ

ವಿವಾದಗಳ ಜೊತೆಜೊತೆಗೇ ಸಾಗುವವರು ಚಿತ್ರ ನಿರ್ದೇಶಕ ರಾಮಗೋಪಾಲ ವರ್ಮ. ಅವರ ಚಿತ್ರ, ಹೇಳಿಕೆಗಳು ಒಂದೆಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತವೆ. ಸದ್ಯ ‘ಗಾಡ್‌, ಸೆಕ್ಸ್‌ ಅಂಡ್‌ ಟ್ರುತ್‌’ ಎನ್ನುವ ಹೊಸ ಪ್ರಾಜೆಕ್ಟ್‌ ಒಂದನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಅದರಲ್ಲಿ ನೀಲಿ ಚಿತ್ರ ತಾರೆ ಮಿಯಾ ಮಲ್ಕೋವಾ ಅಭಿನಯಿಸುತ್ತಿದ್ದಾರೆ.

ಚಿತ್ರದ ಮೊದಲ ನೋಟ ತಿಳಿಸುವ ಎರಡು ಬಗೆಯ ಚಿತ್ರವನ್ನು ಮಿಯಾ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಭಾರತೀಯ ಸಿನಿಮಾ ನಿರ್ದೇಶಕರೊಡನೆ ನಟಿಸುತ್ತಿರುವ ಎರಡನೇ ನೀಲಿಚಿತ್ರ ತಾರೆ ನಾನು. ನಿರ್ದೇಶಕ ರಾಮಗೋಪಾಲ ವರ್ಮಾ ‘ಗಾಡ್‌, ಸೆಕ್ಸ್‌ ಅಂಡ್‌ ಟ್ರುತ್‌’ ಎನ್ನುವ ವಿಡಿಯೊವನ್ನು ಇತ್ತೀಚೆಗೆ ನನ್ನೊಂದಿಗೆ ಯುರೋಪ್‌ನಲ್ಲಿ ಚಿತ್ರೀಕರಿಸಿದರು. ಇದರ ಮೂಲಕ ಭಾರತೀಯರ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿರುವ ಎರಡನೇ ನೀಲಿ ತಾರೆ ನಾನಾದೆ. ಮೊದಲ ಅವಕಾಶ ಸನ್ನಿ ಲಿಯೊನ್‌ಗೆ ಸಿಕ್ಕಿತ್ತು’ ಎಂಬುದು ಮಿಯಾ ಬರೆದುಕೊಂಡಿರುವ ಒಕ್ಕಣೆ.

‘ಚಿತ್ರೀಕರಣ ತುಂಬಾ ಸೊಗಸಾಗಿತ್ತು. ಹಾಗೂ ಚಿಂತನೆಯನ್ನು ಹುಟ್ಟುಹಾಕುವ ಸಾಕಷ್ಟು ವಿಷಯಗಳನ್ನು ಕಲಿತೆ’ ಎಂದು ವರ್ಮಾ ಪ್ರತಿಕ್ರಿಯಿಸಿದ್ದಾರೆ.⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry