ಅಮೇಠಿಯಲ್ಲಿ ರಾಹುಲ್‌ ‘ರಾಮ’; ಮೋದಿ ಹತ್ತು ತಲೆಯ ‘ರಾವಣ’!

7

ಅಮೇಠಿಯಲ್ಲಿ ರಾಹುಲ್‌ ‘ರಾಮ’; ಮೋದಿ ಹತ್ತು ತಲೆಯ ‘ರಾವಣ’!

Published:
Updated:
ಅಮೇಠಿಯಲ್ಲಿ ರಾಹುಲ್‌ ‘ರಾಮ’; ಮೋದಿ ಹತ್ತು ತಲೆಯ ‘ರಾವಣ’!

ಲಖನೌ: ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ‘ರಾಮ’ನಾಗಿ; ಪ್ರಧಾನಿ ನರೇಂದ್ರ ಮೋದಿ ‘ರಾವಣ’ನಾಗಿ ಕಾಣಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನ ಅಧ್ಯಕ್ಷರಾದ ಬಳಿಕ ಸ್ವ ಕ್ಷೇತ್ರ ಅಮೇಠಿಗೆ ಸೋಮವಾರ ಭೇಟಿ ನೀಡಿರುವ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಲು ಹಾಕಿದ್ದ ಫ್ಲೆಕ್ಸ್‌ಗಳಲ್ಲಿ ರಾಹುಲ್‌ ಅವರನ್ನು ‘ರಾಮ’ನ ವೇಷದಲ್ಲಿಯೂ, ಮೋದಿಯನ್ನು ‘ರಾವಣ’ನ ವೇಷದಲ್ಲಿಯೂ ಬಿಂಬಿಸಲಾಗಿದೆ.

ರಾಹುಲ್‌ ಗಾಂಧಿ ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿ ದಾರವನ್ನು ಮೀಟಿ ಎದುರಿಗಿರುವ ಹತ್ತು ತಲೆಯ ರಾವಣನ ರೂಪದಲ್ಲಿರುವ ಮೋದಿ ಅವರತ್ತ ಗುರಿ ಇಟ್ಟಿರುವಂತೆ ಮುದ್ರಿಸಿ ರಾಹುಲ್‌ ‘ರಾಮ’; ಮೋದಿ ‘ರಾವಣ’ ಎಂಬಂತೆ ಬಿಂಬಿಸಲಾಗಿದೆ.

ಅಮೇಠಿ ಜಿಲ್ಲೆಯ ಗುರಿಗಂಜ್‌ನಲ್ಲಿ ಮತ್ತೊಂದು ಫ್ಲೆಕ್ಸ್‌ನಲ್ಲಿ ರಾಹುಲ್‌ ರಥವೇರಿ ಹೋಗುತ್ತಿರುವಂತೆ ಬಿಂಬಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry