ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಕೋರಿದ ರಾಹುಲ್, ಅಮಿತ್ ಷಾ, ಮೋದಿ

7

ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಕೋರಿದ ರಾಹುಲ್, ಅಮಿತ್ ಷಾ, ಮೋದಿ

Published:
Updated:
ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಕೋರಿದ ರಾಹುಲ್, ಅಮಿತ್ ಷಾ, ಮೋದಿ

ನವದೆಹಲಿ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

‘ಕಹಿ ನೆನಪು ಮರೆಯಾಗಲಿ,

ಸಿಹಿ ನೆನಪು ಚಿರವಾಗಲಿ,

ಹೊಸ ದಿನಗಳಲ್ಲಿ ನೀವು,

ಕಂಡ ಕನಸು ನನಸಾಗಲಿ

ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು

#HappySankranthi’

ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಸೂರ್ಯನು ಉತ್ತರಾಯಣಕ್ಕೆ ಸಂಚರಿಸುವ ಈ ಶುಭ ಸಂದರ್ಭದಲ್ಲಿ ಹೊಸ ಪಥದಲ್ಲಿ ನವ ಉತ್ಸಾಹದಿಂದ ಶಾಂತಿ ಮತ್ತು ಸಮೃದ್ಧಿ ಭರಿತ ಸುವರ್ಣ ಕರ್ನಾಟಕವನ್ನು ಮತ್ತೆ ನಿರ್ಮಾಣ ಮಾಡುವ ಸಂಕಲ್ಪ ಮಾಡೋಣ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು’ ಎಂದು ಅಮಿತ್‌ ಷಾ ಟ್ವೀಟ್ ಮಾಡಿದ್ದಾರೆ.

‘ಸಮಸ್ತ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಸುಗ್ಗಿಯ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry