ಇಸ್ರೊ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ವಿಶೇಷ ಪೂಜೆ ನೆರವೇರಿಸಿದ ಡಾ.ಕೆ.ಶಿವನ್‌

7

ಇಸ್ರೊ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ವಿಶೇಷ ಪೂಜೆ ನೆರವೇರಿಸಿದ ಡಾ.ಕೆ.ಶಿವನ್‌

Published:
Updated:
ಇಸ್ರೊ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ವಿಶೇಷ ಪೂಜೆ ನೆರವೇರಿಸಿದ ಡಾ.ಕೆ.ಶಿವನ್‌

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೊ) ಅಧ್ಯಕ್ಷರಾಗಿ ವಿಜ್ಞಾನಿ ಡಾ.ಕೆ.ಶಿವನ್‌ ನೇಮಕಾತಿ ಆದೇಶ ಪ್ರಕಟಗೊಂಡ ನಂತರ ಅವರು ಶ್ರೀಹರಿಕೋಟಾ ಸಮೀಪದ ದೇವಾಲದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು.

ಶ್ರೀಹರಿಕೋಟಾ ಸಮೀಪದ ಸುಳ್ಳೂರುಪೇಟೆಯ ಚೆಂಗಲಮ್ಮ ದೇವಾಲಯದಲ್ಲಿ ಕಳೆದ ವಾರ ಡಾ.ಕೆ.ಶಿವನ್‌ ಅವರು ವಿಶೇಷ ಪೂಜೆ ಮಾಡಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ತಿರುವನಂತಪುರದಲ್ಲಿರುವ ‘ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ  ಡಾ. ಶಿವನ್‌ ಅವರು ಎ.ಎಸ್‌.ಕಿರಣ್‌ ಕುಮಾರ್‌ ಅವರ ಜಾಗಕ್ಕೆ ನೇಮಕವಾಗಿದ್ದಾರೆ. ಇವರು ಮುಂದಿನ ಮೂರು ವರ್ಷ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಹಾಗೂ ಬಾಹ್ಯಾಕಾಶ ಆಯೋಗದ ಅಧ್ಯಕ್ಷರೂ ಆಗಿರುತ್ತಾರೆ.

ಜ.14ರಂದು ಎ.ಎಸ್‌.ಕಿರಣ್‌ ಕುಮಾರ್‌ ಅವರ ಕಾರ್ಯಾವಧಿ ಪೂರ್ಣಗೊಂಡಿದೆ. 

ಶಿವನ್‌ ಅವರು ಏರೋನಾಟಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ’ಮದ್ರಾಸ್‌ ತಾಂತ್ರಿಕ ಸಂಸ್ಥೆ’ಯಿಂದ ಪದವಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂಬೈನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಪಿಎಚ್‌.ಡಿ ಮುಗಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry